ಆರೋಗ್ಯ

ರಾಜ್ಯದಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿ..!

Views: 22

ಉತ್ತರ ಕನ್ನಡ: ಸಿದ್ದಾಪುರ ತಾಲೂಕಿನಲ್ಲಿ ಮಂಗನಕಾಯಿಲೆ ಏರಿಕೆ ಆಗುತ್ತಿರುವುದು ಕಾಣುತ್ತಿದ್ದು 65 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ 4ನೇ ಬಲಿ ಆದಂತೆ ಆಗಿದೆ.

ಸಿದ್ದಾಪುರ ತಾಲೂಕಿನ ಕಲ್ಲೂರಿನ ವೃದ್ಧ (65) ಸಾವನ್ನಪ್ಪಿದ್ದಾರೆ. ಇದು ಇಡೀ ಜಿಲ್ಲೆಯಲ್ಲೇ ಮಂಗನ ಕಾಯಿಲೆಗೆ 4ನೇ ಬಲಿಯಾದರೆ, ಸಿದ್ದಾಪುರ ತಾಲೂಕಿನಲ್ಲಿ 3ನೇ ಸಾವಾಗಿದೆ. ಹೀಗಾಗಿ ಕೆಎಫ್​ಡಿ (ಕ್ಯಾಸನೂರು ಫಾರೆಸ್ಟ್​ ಡಿಸೀಸ್) ಏರಿಕೆಯಾಗುತ್ತಿದೆ ಎಂದು ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ವೃದ್ಧನಿಗೆ ಜ್ವರ ಕಾಣಿಸಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆಸ್ಪತ್ರೆಯಲ್ಲಿ ಪರಿಶೀಲನೆ ವೇಳೆ ಕೆಎಫ್​ಡಿ ಇರುವು ದೃಢವಾಗಿದ್ದು ಪಾಸಿಟಿವ್ ಎಂದು ವೈದ್ಯರು ಹೇಳಿದ್ದರು. ಇದಕ್ಕೆ ಲಸಿಕೆ ಇಲ್ಲದ ಕಾರಣ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸರಕಾರಿ ಯಾವುದೇ ರೀತಿಯ ಸ್ಪಂದನೆ ಇಲ್ಲದೆ ಕಾರಣ ಸಾರ್ವಜನಿಕರು   ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ

Related Articles

Back to top button