ಯುಗಾದಿ ಹಬ್ಬಕ್ಕೆ ಊರಿಗೆ ತೆರಳುವಾಗ ಭೀಕರ ಅಪಘಾತ: ಮೂವರು ಸಾವು

Views: 126
ಕನ್ನಡ ಕರಾವಳಿ ಸುದ್ದಿ: ಟೆಂಪೋ ಟ್ರಾವೆಲರ್ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಫ್ಯಾಕ್ಟರಿ ಸಮೀಪ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ನಡೆದಿದೆ.
ಬೆಂಗಳೂರಿನಿಂದ ತಮ್ಮ ಗ್ರಾಮವಾದ ತಳಕು ಜೆಮ್ಲಾ ನಾಯಕನಹಟ್ಟಿ ಗ್ರಾಮಕ್ಕೆ ಟಿ. ಟಿ ವಾಹನದಲ್ಲಿ ಬರುತ್ತಿರುವಾಗ ಟಿಪ್ಪರ್ ವಾಹನ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಈ ವೇಳೆ ಟಿಟಿ ವಾಹನದಲ್ಲಿ ಚಾಲಕ ಸೇರಿದಂತೆ ಒಟ್ಟು 10 ಮಂದಿ ಇದ್ದು ಇವರಲ್ಲಿ ಕುಮಾರ ನಾಯ್ಕ (46)ಶಂಕರ್ ಬಾಯಿ (65)ಶ್ವೇತ ಎ.(38) ಮೃತಪಟ್ಟಿದ್ದಾರೆ.
ಗಾಯಾಳುಗಳಾದ ಲಕ್ಷ್ಮಿ ಬಾಯಿ, (75) ಪ್ರಶಾಂತ (38) ಶೈಲಜ (38) ಪುಷ್ಪವತಿ(19) ಟಿ.ಕೆ.ಪ್ರೀತಮ್ ಕುಮಾರ್ (16) ತಿಪ್ಪೇಸ್ವಾಮಿ (43) ಎಂಬುವವರಿಗೆ ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿದ್ದಾರೆ.