ಆರೋಗ್ಯ

ಮೊಬೈಲ್ ಫೋನ್‌ನಲ್ಲಿ ವೈದ್ಯರಿಂದ ಮಾಹಿತಿ ಪಡೆಯುತ್ತಾ ನರ್ಸ್‌ ಹೆರಿಗೆ:ಅವಳಿ ಮಕ್ಕಳು ಸಾವು, ಭುಗಿಲೆದ್ದ ಆಕ್ರೋಶ

Views: 161

ಕನ್ನಡ ಕರಾವಳಿ ಸುದ್ದಿ: ಮೊಬೈಲ್ ಫೋನ್‌ನಲ್ಲಿ ವೈದ್ಯರಿಂದ ಮಾಹಿತಿ ಪಡೆಯುತ್ತಾ ನರ್ಸ್‌ ಹೆರಿಗೆ ಮಾಡಿಸಿದ್ದು, ಅವಳಿ ಮಕ್ಕಳು ಮೃತಪಟ್ಟಿವೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಆಕ್ರೋಶ ಭುಗಿಲೆದ್ದಿದೆ.

ಆಸ್ಪತ್ರೆಯಲ್ಲಿಲ್ಲದ ವೈದ್ಯರು ಅಲ್ಲೆಲ್ಲೋ ಕುಳಿತುಕೊಂಡು ನರ್ಸ್‌ಗೆ ಸೂಚನೆ ನೀಡುತ್ತಿದ್ದರು. ಗರ್ಭಿಣಿ ಐವಿಎಫ್ ಮಾಡಿಸಿಕೊಂಡಿದ್ದರು. ಈ ಪ್ರಕರಣವು ಸಾಧಾರಣ ಹೆರಿಗೆಯಂತಿರಲಿಲ್ಲ, ತುಂಬಾ ಸೂಕ್ಷ್ಮವಾಗಿತ್ತು. ವಾರಗಳು ತುಂಬುವ ಮುನ್ನವೇ 18 ವಾರಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಶಿಶುಗಳನ್ನು ಹೊರತೆಗೆದಿದ್ದರು. ತಾಯಿಯ ಸ್ಥಿತಿ ಸ್ಥಿರವಾಗಿದೆ. ಆದರೆ ಮಕ್ಕಳು ಡೆಲಿವರಿ ಆದ ಕೆಲವೇ ನಿಮಿಷಕ್ಕೆ ಮೃತಪಟ್ಟಿವೆ.

ಆಸ್ಪತ್ರೆ ಹೊರಗೆ ಜನರು ಜಮಾಯಿಸಿದ್ದು, ವೈದ್ಯರ ಹಾಗೂ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Related Articles

Back to top button