ಧಾರ್ಮಿಕ

ಮಾರ್ಚ್ 13ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ” ಬ್ರಹ್ಮ ಕಲಶ ವರ್ಧಂತ್ಯುತ್ಸವ”

Views: 30

ಕುಂದಾಪುರ :ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ “ಬ್ರಹ್ಮ ಕಲಶ ವರ್ಧಂತ್ಯುತ್ಸವ” ಕಾರ್ಯಕ್ರಮ ದಿನಾಂಕ 13.03.2024 ರಂದು ನಡೆಯಲಿದೆ.

ಆ ಪ್ರಯುಕ್ತ ಮಾರ್ಚ್13ರಂದು ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ಪುಣ್ಯಾಹ, ಗಣ ಹೋಮ, ಶಾಂತಿ, ಪ್ರಾಯಶ್ಚಿತ ಹೋಮ, ತತ್ವ ಹೋಮ, ಕಲಾಹೋಮ ನಡೆಯಲಿದೆ.

ಪೂರ್ವಾಹ್ನ 10:30ಕ್ಕೆ 108 ರಜತ ಕಲಶ ಅಭಿಷೇಕದೊಂದಿಗೆ ಪ್ರಧಾನ ಸುವರ್ಣ ಕಲಶಾಭಿಷೇಕ, ಮಂಗಳಾರತಿ,ಪ್ರಸಾದ ವಿತರಣೆ ನಡೆಯಲಿದ್ದು, ಸದ್ಭಕ್ತರಾದ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸುವಂತೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ದೇವಳದ ಆಡಳಿತ ಧರ್ಮದರ್ಶಿ ಶ್ರೀ ಕೆ.ರಮಣ ಉಪಾಧ್ಯಾಯ ತಿಳಿಸಿದ್ದಾರೆ.

Related Articles

Back to top button