ಇತರೆ

ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಮಠಕ್ಕೆ ಧಾವಿಸಿ ಸ್ವಾಮೀಜಿಯನ್ನು ಹೊರಗೆಳೆದುಕೊಂಡು ಧರ್ಮದೇಟು!

Views: 100

ಕನ್ನಡ ಕರಾವಳಿ ಸುದ್ದಿ: ಮಹಿಳೆಯೊಂದಿಗೆ ಸ್ವಾಮೀಜಿಯೊಬ್ಬರು ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಹಾಗೂ ಮಹಿಳೆಯ ಸಂಬಂಧಿಗಳು ಆರೋಪಿ ಸ್ವಾಮೀಜಿಯನ್ನುಮಠಕ್ಕೆ ಧಾವಿಸಿ ಸ್ವಾಮೀಜಿಯನ್ನು ಹೊರಗೆಳೆದುಕೊಂಡು ಧರ್ಮದೇಟು ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಮಠದ ಜಮ್ಮಣ್ಣ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬಳ್ಳಾರಿ ಮೂಲದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ಮಹಿಳೆ ಸಂಬಂಧಿಕರು ಸ್ವಾಮೀಜಿಯನ್ನು ಹಿಡಿದು ಗೂಸಾ ನೀಡಿದ್ದಾರೆ.

ಜಮ್ಮಣ್ಣ ಸ್ವಾಮೀಜಿ ವಾಮಾಚಾರ, ಅನಾರೋಗ್ಯ ನಿವಾರಣೆ ಎಂದು ಜನರಿಗೆ ವಂಚಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈಗ ಮಹಿಳೆಗೆ ಕಿರುಕುಳ ನೀಡಿ ಜನರಿಂದ ಹಿಗ್ಗಾ ಮುಗ್ಗಾ ಏಟು ತಿಂದಿದ್ದಾರೆ.

Related Articles

Back to top button
error: Content is protected !!