ಜನಮನ

ಮಹಿಳೆಯರ ಖಾತೆಗೆ 3 ಸಾವಿರ ಹಣ ಎಂಬ ಸುದ್ದಿ ಎಲ್ಲೆಡೆ ಪೋಸ್ಟ್‌ ಆಫೀಸ್‌ ಎದುರು ಸರದಿ ಸಾಲು..!

Views: 65

ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ತಲಾ 2 ಸಾವಿರ ಹಣ ಹಾಕುವಂತೆ, ಕೇಂದ್ರ ಸರಕಾರ ಕೂಡಾ ಖಾತೆಗೆ 3 ಸಾವಿರ ಹಣ ಹಾಕುತ್ತದೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದನ್ನು ನಂಬಿ ಮಹಿಳೆಯರು ಖಾತೆ ಮಾಡಿಸಲು ರಾತ್ರಿಯಿಡಿ ಪೋಸ್ಟ್‌ ಆಫೀಸ್‌ ಎದುರು ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ಇದರಿಂದ ಪೋಸ್ಟ್‌ ಆಫೀಸ್‌ ಎದುರಿನಲ್ಲಿದಿನದಿಂದ ದಿನಕ್ಕೆ ಜನಜಂಗುಳಿ ಹೆಚ್ಚಾಗುತ್ತಿದ್ದು, ಕಚೇರಿ ಎದುರು ಜಮಾಯಿಸಿದ ಜನರನ್ನು ಸಂಬಾಳಿಸುವುದೇ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ.

ಕಳೆದ ಒಂದು ವಾರದಿಂದ ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ ಸೇರಿದಂತೆ ಎಲ್ಲ ಶಾಖೆಯಲ್ಲಿ ನಿತ್ಯ ಸಾವಿರಾರು ಮಹಿಳೆಯರು ಆಗಮಿಸಿ, ಸರದಿಯಲ್ಲಿ ನಿಂತು ಖಾತೆ ಮಾಡಿಸುತ್ತಿದ್ದಾರೆ. ಕೇಂದ್ರ ಸರಕಾರ ಯಾವುದೇ ಹಣ ಹಾಕುವುದಾಗಿ ಆದೇಶ ಹೊರಡಿಸಿಲ್ಲಎಂದು ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಹಿಳೆಯರಿಗೆ ಮನವರಿಕೆ ಮಾಡಿದರೂ ಅದನ್ನು ನಂಬುತ್ತಿಲ್ಲ.

ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಗೆ ನಿತ್ಯ 1500 ಕ್ಕೂ ಹೆಚ್ಚು ಮಹಿಳೆಯರು ಬರುತ್ತಿದ್ದು, ದಿನಕ್ಕೆ 500 ಐಪಿಪಿಬಿ ಖಾತೆ ಮಾತ್ರ ಮಾಡಿಕೊಡಲಾಗುತ್ತಿದೆ. ಮಹಿಳೆಯರ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿಅಂಚೆ ಕಚೇರಿಯ ನಿತ್ಯದ ಕೆಲಸ ಬಿಟ್ಟು ಐಪಿಪಿಬಿ ಖಾತೆ ಮಾಡುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಸಿಬ್ಬಂದಿ.

‘ಕೇಂದ್ರ ಸರಕಾರ ಖಾತೆಗೆ ಹಣ ಹಾಕುವುದಾಗಿ ಹೇಳಿಲ್ಲವೆಂದು ಎಷ್ಟೇ ಮನವಿ ಹಾಗೂ ಮನವರಿಕೆ ಮಾಡಿದರೂ ಮಹಿಳೆಯರು ಕೇಳುತ್ತಿಲ್ಲ. ಸ್ಪರ್ಧೆಗೆ ಬಿದ್ದವರಂತೆ ಪೋಸ್ಟ್‌ ಆಫೀಸ್‌ನಲ್ಲಿಐಪಿಪಿಬಿ ಖಾತೆ ಮಾಡಿಸಿಕೊಳ್ಳುತ್ತಿದ್ದಾರೆ. ಅವರ ಬೇಡಿಕೆಯಂತೆ 200ರೂ. ಶುಲ್ಕ ಪಡೆದು ಐಪಿಪಿಬಿ ಖಾತೆ ತೆರೆದುಕೊಡುತ್ತಿದ್ದೇವೆ. ಎರಡ್ಮೂರು ದಿನಗಳಲ್ಲಿಎರಡೂವರೆ ಸಾವಿರಕ್ಕೂ ಹೆಚ್ಚು ಖಾತೆ ಮಾಡಿಕೊಟ್ಟಿದ್ದೇವೆ’ ಎಂದು ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ ಹಿರಿಯ ಅಧಿಕಾರಿಗಳು  ಮಾಹಿತಿ ನೀಡಿದರು.

ಖಾಸಗಿ ಹಾಗೂ ಸರಕಾರಿ ಬ್ಯಾಂಕ್‌ಗಳಲ್ಲಿಖಾತೆ ಇಲ್ಲದೇ ನೇರ ಖಾತೆಗೆ ಜಮೆಯಾಗುವ ಸರಕಾರಿ ಯೋಜನೆಗಳ ಹಣ ಪಡೆಯಲು ಸಾಧ್ಯವಿಲ್ಲದ ಫಲಾನುಭವಿಗಳು ಪೋಸ್ಟ್‌ ಆಫೀಸ್‌ನಲ್ಲಿಐಪಿಪಿಬಿ ಖಾತೆ ತೆರೆಯಬೇಕು. ಅಂತವರಿಗೆ ಸರಕಾರಿ ಯೋಜನೆ ಹಣ ನೇರವಾಗಿ ಖಾತೆಗೆ ಬರಲು ಅನುಕೂಲವಾಗುತ್ತದೆ. ಹೀಗಾಗಿ ಅಂಚೆ ಕಚೇರಿಯಲ್ಲಿಈ ಖಾತೆ ಮಾಡಿಸಬೇಕು ಎಂದು ಸರಕಾರ ಹೇಳಿದೆ.

ಆದರೆ, ಮಹಿಳೆಯರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಈಗಾಗಲೇ ಬೇರೆ ಬ್ಯಾಂಕ್‌ಗಳಲ್ಲಿ ಖಾತೆ ಇದ್ದಾಗಲೂ, ಪೋಸ್ಟ್‌ ಆಫೀಸ್‌ನಲ್ಲಿಹೊಸದಾಗಿ ಐಪಿಪಿಬಿ ಖಾತೆ ತೆರೆಯಲು ಮುಂದಾಗುತ್ತಿರುವುದು ಇಷ್ಟೆಲ್ಲ ಗೊಂದಲ, ಗದ್ದಲಕ್ಕೆ ಕಾರಣವಾಗಿದೆ.

 

Related Articles

Back to top button
error: Content is protected !!