ಇತರೆ

ಮರವಂತೆ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಪಿಕಪ್ ಡಿಕ್ಕಿಯಾಗಿ ಸಾವು

Views: 110

ಕನ್ನಡ ಕರಾವಳಿ ಸುದ್ದಿ: ಮರವಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೇಶವ ಬೊಬ್ಬರ್ಯ ದೇವಸ್ಥಾನದ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಕುಂದಾಪುರ ಕಡೆಯಿಂದ ವೇಗವಾಗಿ ಬಂದ ಪಿಕ್ ಅಪ್ ಢಿಕ್ಕಿಯಾಗಿ ಯಳಜಿತ್ ಗ್ರಾಮದ ಬಾಬು ಅವರ ಪತ್ನಿ ಲಕ್ಷ್ಮೀ (45) ಮೃತಪಟ್ಟಿದ್ದಾರೆ.

ಲಕ್ಷ್ಮೀ ಅವರು ಪತಿಯ ಜತೆ ಬಸ್ ನಿಲ್ದಾಣದ  ಬದಿಯಲ್ಲಿ ಮಧ್ಯಾಹ್ನದ  ವೇಳೆಗೆ ನಿಂತಿದ್ದರು. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಪಿಕಪ್ ರಸ್ತೆ ದಾಟಿ ತೀರಾ ಎಡಬದಿಗೆ ಬಂದು ಢಿಕ್ಕಿ ಹೊಡೆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

Related Articles

Back to top button
error: Content is protected !!