ಮದರ್ ತೆರೆಸಾ ಪುಟಾಣಿಗಳಿಂದ ಅದ್ಭುತ ಮೌಲ್ಯವನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ

Views: 139
ಕನ್ನಡ ಕರಾವಳಿ ಸುದ್ದಿ: ಮದರ್ ತೆರೇಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣದ ಶಾಲಾ ವಿಭಾಗದಲ್ಲಿ ಒಂದನೇ ತರಗತಿಯ ಮಕ್ಕಳು ಸಾಮಾಜಿಕ ಶಿಕ್ಷಣದ ಭಾಗವಾಗಿ “ಗೋಲ್ಡನ್ ರೂಲ್ಸ್” ಎಂಬ ಮೌಲ್ಯಾಧಾರಿತ ವಿಷಯದ ಕುರಿತು ಅತ್ಯಂತ ಮನಮುಟ್ಟುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜುಲೈ 26 ರಂದು ಪ್ರದರ್ಶಿಸಿದರು.
ಈ ಕಾರ್ಯಕ್ರಮವು ‘ನಮಸ್ತೇ, ವೆಲ್ಕಮ್’, ‘ಸಾರಿ’, ‘ಎಕ್ಸ್ ಕ್ಯೂಸ್ ಮಿ’, ‘ಪ್ಲೀಸ್’, ‘ಥ್ಯಾಂಕ್ ಯು’ ಎಂಬ ದಿನನಿತ್ಯದ ಶಿಷ್ಟಾಚಾರದ ಪದಗಳ ಮಹತ್ವವನ್ನು ಬಿಂಬಿಸುವಂತೆ ರೂಪುಗೊಂಡಿತ್ತು.
ಮಕ್ಕಳು ಬಣ್ಣ ಬಣ್ಣದ ವೇಷಭೂಷಣದೊಂದಿಗೆ, ನಾಟಕ, ಗೀತೆ ಹಾಗೂ ಸಂವಾದದ ಮೂಲಕ ಈ ಶಿಷ್ಟಾಚಾರದ ಪದಗಳನ್ನು ಹೇಗೆ ನಿತ್ಯಜೀವನದಲ್ಲಿ ಬಳಸಬೇಕು ಎಂಬುದನ್ನು ಜೀವಂತವಾಗಿ ಪ್ರದರ್ಶಿಸಿದರು. ಅವರ ಉತ್ಸಾಹ ಮತ್ತು ಸಹಜ ಅಭಿನಯ ಎಲ್ಲರ ಮನಸೂರೆಗೊಂಡಿತ್ತು.
ಕಾರ್ಯಕ್ರಮದ ಅಂತ್ಯದಲ್ಲಿ ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಮಾತನಾಡುತ್ತಾ, ಮಕ್ಕಳ ಈ ಪ್ರದರ್ಶನವನ್ನು ಶ್ಲಾಘಿಸಿದರು ಹಾಗೂ “ಈ ಗುಣಗಳನ್ನು ಕೇವಲ ಕಲಿತರೆ ಸಾಲದು, ನಮ್ಮ ನಿತ್ಯದ ಜೀವನದಲ್ಲಿ ಅನುಸರಿಸಿ ಆತ್ಮೀಯ ಸಂಬಂಧಗಳನ್ನು ನಿರ್ಮಿಸಬೇಕು” ಎಂದು ಸಲಹೆ ನೀಡಿದರು. ಮತ್ತು ಈ ಸುವರ್ಣ ನಿಯಮಗಳನ್ನು ನಮ್ಮ ಜೀವನದಲ್ಲಿ ಭಾವಪೂರ್ಣವಾಗಿ ಹೇಗೆ ಅಭಿವ್ಯಕ್ತಿಸಬೇಕು ಎನ್ನುವುದನ್ನು ವಿದ್ಯಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು. ಇದರಿಂದ ಮಕ್ಕಳ ನಗುವಿನ ಹೊಳಪಿನಲ್ಲಿ ಮೌಲ್ಯಗಳು ಪ್ರಕಾಶಿಸಿದವು.
ಪುಟಾಣಿಗಳ ನಿಖರ ನಿರೂಪಣೆ, ಆತ್ಮೀಯ ಸ್ವಾಗತ ಹಾಗೂ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಒಂದು ಆತ್ಮಸಂಪನ್ನ ಅನುಭವವಾಗಿ ಪರಿವರ್ತಿತವಾಯಿತು.












