ಇತರೆ
ಮಂಗಳೂರು ಮುಂದುವರೆದ ಭಾರೀ ಮಳೆ ಅಬ್ಬರ:ಮನೆ ಮೇಲೆ ಗುಡ್ಡ ಕುಸಿದು 7 ವರ್ಷದ ಬಾಲಕಿ ನಿಧನ

Views: 121
ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ರಾತ್ರಿಯಿಡೀ ಸುರಿದ ಮಳೆಗೆ ಕಾಂಪೌಂಡ್ ಗೋಡೆ ಮನೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಸಮೀಪದ ಮೊಂಟೆಪದವು ಕೋಡಿ ಎಂಬಲ್ಲಿ ನಡೆದಿದೆ.
ಕಾನಕರೆ ನಿವಾಸಿ ನೌಶಾದ್ ಎಂಬವರ ಪುತ್ರಿ ನಯೀಮ (7) ಮೃತ ಬಾಲಕಿ. ನೌಶಾದ ಅವರ ಮನೆಯ ಹಿಂಬದಿಯ ಕಾಂಪೌಂಡ್ ಗೋಡೆ ಕುಸಿದಿದೆ. ಆಗ ಮನೆ ಮೇಲೆ ಮಣ್ಣು ಬಿದಿದ್ದೆ. ಪರಿಣಾಮ ಮನೆಯ ಕಿಟಕಿ ಬಾಲಕಿಯ ಮೇಲೆ ಬಿದ್ದು ಗಂಭೀರ ಗಾಯಗೊಂಡ ಬಾಲಕಿ ನಯೀಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದ್ದಾಳೆ.