ಇತರೆ
ಭೀಕರ ಅಪಘಾತ: ಹಸೆಮಣೆಯೇರಲು ಸಿದ್ಧರಾಗಿದ್ದ ನರೇಗಾ ಮಹಿಳಾ ಇಂಜಿನಿಯರ್ ಸಾವು

Views: 406
ಕನ್ನಡ ಕರಾವಳಿ ಸುದ್ದಿ: ಭೀಕರ ರಸ್ತೆ ಅಪಘಾತದಲ್ಲಿ ನರೇಗಾ ಮಹಿಳಾ ಇಂಜಿನಿಯರ್ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿ ನಡೆದಿದೆ.
ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿಯಲ್ಲಿ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಶರಣ್ಯ ಗೌಡ (25) ಮೃತ ಎಂಜಿನಿಯರ್. ಮೂಲತಃ ಹಲಗೂರು ಸಮೀಪದ ಬಳೆಹೊನ್ನಿಗ ಗ್ರಾಮದ ಶರಣ್ಯಾ ಒಂದು ವರ್ಷದಿಂದ ಸಾತನೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು
ಶರಣ್ಯಾಗೆ ಫೆ.16ರಂದು ವಿವಾಹ ಕೂಡ ನಿಶ್ಚಯವಾಗಿತ್ತು. ಹಸೆಮಣೆಯೇರಲು ಸಿದ್ಧರಾಗಿದ್ದ ಇಂಜಿನಿಯರ್ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬಳೆಹೊನ್ನಿಗ ಗ್ರಾಮದಿಂದ ಹಲಗೂರು ಗ್ರಾಮದ ಕಡೆಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.