ಯುವಜನ

ಭಾವಿಪತ್ನಿ ಜೊತೆ ರವಿಶಂಕರ್ ಗುರೂಜಿ  ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ,ಮದುವೆ ಯಾವಾಗ?

Views: 78

ಕನ್ನಡ ಕರಾವಳಿ ಸುದ್ದಿ: ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಭಾವಿಪತ್ನಿ ಸಿವಶ್ರೀ ಸ್ಕಂದ ಪ್ರಸಾದ್ ಜೊತೆ ಸೇರಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.

ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭಾವಿ ಪತ್ನಿ ಸಿವಶ್ರೀ ಸ್ಕಂದ ಪ್ರಸಾದ್ ಜೊತೆ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದರು. ಈ ವೇಳೆ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಗುರೂಜಿ ಅವರು ಇಬ್ಬರಿಗೂ ಶುಭ ಹಾರೈಸಿದ್ದಾರೆ.

ಬಿಜೆಪಿಯ ಯುವ ಸಂಸದರಾದ ತೇಜಸ್ವಿ ಸೂರ್ಯ ಅವರು ಚೆನ್ನೈ ಮೂಲದ ಗಾಯಕಿ, ನಟಿ ಸಿವಶ್ರೀ ಸ್ಕಂದ ಪ್ರಸಾದ್ ಅವರ ಜೊತೆ ವಿವಾಹವಾಗಲಿದ್ದಾರೆ ಎಂದು ಇತ್ತೀಚೆಗಷ್ಟೇ ಹೇಳಲಾಗಿತ್ತು. ಇದರ ಬೆನ್ನಲ್ಲೇ ಇಬ್ಬರು ನಗರದ ಹೊರ ಹೊಲಯದಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ವಿಶೇಷ ಎನಿಸಿತು.ಈ ಯುವ ಜೋಡಿಯ ವಿವಾಹ ಸಮಾರಂಭವು 2025ರ ಮಾರ್ಚ್ 4 ರಂದು ನಡೆಯಲಿದೆ.

Related Articles

Back to top button