ಸಾಂಸ್ಕೃತಿಕ
ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ನಮಸ್ವಿ ಸಾಧನೆ

Views: 49
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರ ಆಶ್ರಯದಲ್ಲಿ 2024ರಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಕುಂದಾಪುರದ ನಮಸ್ವಿ ಎಸ್. ಶೆಟ್ಟಿಗಾರ್ ಇವರು ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ 92.75% ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಸಾಧನೆಗೈದಿದ್ದಾರೆ.
ಶ್ರುತಿ ಭಟ್ ಉದ್ಯಾವರ ಹಾಗೂ ಪ್ರಸ್ತುತ ಆನಂದ್ ಕೇರಳ ಇವರಲ್ಲಿ ಭರತನಾಟ್ಯ ಅಭ್ಯಾಸವನ್ನು ಮಾಡುತ್ತಿರುವ ಈಕೆ ಕುಂದಾಪುರ ತಾಲೂಕಿನ ಶ್ರೀಧರ್ ಕುಮಾರ್ ಹಾಗೂ ಲಾವಣ್ಯ ಶ್ರೀಧರ್ ದಂಪತಿ ಪುತ್ರಿ