ಇತರೆ

ಬ್ರಹ್ಮಾವರ ಆರತಕ್ಷತೆ ಕಾರ್ಯಕ್ರಮದಲ್ಲಿ ಲಕ್ಷಾಂತರ ರೂಪಾಯಿ ಕಳವು

Views: 198

ಬ್ರಹ್ಮಾವರ: ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲೇ ಲಕ್ಷಾಂತರ ರೂಪಾಯಿ ನಗದು ಇದ್ದ ಬ್ಯಾಗ್’ನ್ನು ಕಳ್ಳರು ಲಪಟಾಯಿಸಿದ್ದಾರೆ.

ಶ್ಯಾಮಿಲಿ ಶನಾಯ ಹಾಲ್‌ ನಲ್ಲಿ ಜಯಶ್ರೀ ಸುರೇಶ್‌ ಅವರ ಮಗಳ ಮದುವೆಯ ಆರತಕ್ಷತೆ ಕಾರ್ಯಕ್ರಮ ಇತ್ತು. ಈ ಸಂದರ್ಭದಲ್ಲಿ ಕೈಯಲ್ಲಿ ಹಿಡಿದಿದ್ದ ಬ್ಯಾಗನ್ನು ರಾತ್ರಿ 8:50 ಕ್ಕೆ ಹಾಲ್‌ ಸ್ಟೇಜ್‌ ನ ಎಡಬದಿಯ ಕುರ್ಚಿಯ ಮೇಲೆ ಇಟ್ಟು ಮಗಳೊಂದಿಗೆ ಫೋಟೋ ತೆಗೆಸಿ ಮರಳಿ ಬಂದು ನೋಡಿದಾಗ ಯಾರೋ ಕಳ್ಳರು ಬ್ಯಾಗ್‌ ಎತ್ತಿಕೊಂಡು ಹೋಗಿದ್ದಾರೆ.  ಕಳವಾದ ಸದ್ರಿ ಬ್ಯಾಗ್‌’ನಲ್ಲಿ 2,40,000/- ಮೌಲ್ಯದ ನಗದು ಹಾಗೂ ಇತರ ವಸ್ತುಗಳು ಕಳವಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 38/2024 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button