ಇತರೆ

ಬೈಂದೂರು: ಬೈಕ್‌ಗೆ ನಾಯಿ ಕಟ್ಟಿ ಎಳೆದೊಯ್ದ ವಿಡಿಯೋ ವೈರಲ್: ಸಾರ್ವಜನಿಕರಿಂದ ಆಕ್ರೋಶ 

Views: 173

ಕನ್ನಡ ಕರಾವಳಿ ಸುದ್ದಿ: ಮನೆಯಲ್ಲಿ ಸಾಕು ನಾಯಿಯನ್ನೇ ವ್ಯಕ್ತಿಯೋರ್ವ ಬೈಕ್‌ನ ಹಿಂಬದಿಯ ಸರಪಳಿಯಿಂದ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ.

ಶನಿವಾರ ಸಂಜೆ ಸಮಯದಲ್ಲಿ ಬೈಂದೂರು ಪೇಟೆಯಿಂದ ಹೆದ್ದಾರಿ 66ರಲ್ಲಿ ಬೈಂದೂರು  ಪಡುವರಿ ನಿವಾಸಿ ತನ್ನ ಸಾಕು ನಾಯಿಯನ್ನು ಬೈಕ್‌ನ ಹಿಂಬದಿ ಸರಪಳಿಯಿಂದ ಕಟ್ಟಿ 2 ಕಿ.ಮೀ. ದೂರದವರೆಗೆ ಎಳೆದೊಯ್ದಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಬೈಕನ್ನು ನಿಲ್ಲಿಸಿ ವಿಚಾರಿಸಿದಾಗ ಇದು ನಾನು ಮನೆಯಲ್ಲಿ ಸಾಕಿದ ನಾಯಿ ನೀವ್ಯಾರು ಕೇಳುವುದಕ್ಕೆ ಎಂದು ಪ್ರಶ್ನಿಸಿದ್ದಾರೆ. ಆ ಬಳಿಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಕ್ಷಮೆಯಾಚಿಸಿದ್ದಾರೆ.

ನಾಯಿಯನ್ನು ಎಳೆದೊಯ್ದರಿಂದ ಗಾಯವಾಗಿ ರಕ್ತ ಸುರಿದಿದೆ. ನಾಯಿಯನ್ನು ಹಿಂಸಿಸುವ ಅಮಾನವೀಯ ಕೃತ್ಯಕ್ಕಾಗಿ ಈ ವ್ಯಕ್ತಿಯ ವಿರುದ್ದ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Articles

Back to top button