ಬೆಳ್ತಂಗಡಿ: ಎಟಿಎಂ ಬಳಸಲು ತಿಳಿಯದ ವ್ಯಕ್ತಿಗೆ ಸಹಾಯ ಮಾಡಿದಾತನಿಂದಲೇ ವಂಚನೆ..!

Views: 54
ಬೆಳ್ತಂಗಡಿ: ಎಟಿಎಂ ಕಾರ್ಡ್ ಬಳಸಲು ತಿಳಿಯದ ವ್ಯಕ್ತಿಯೊಬ್ಬರು ಅಪರಿಚಿತ ವ್ಯಕ್ತಿ ಬಳಿ ಸಹಾಯ ಕೇಳಿ ಆತನು ಎಟಿಎಂ ಬದಲಾಯಿಸಿ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಮೇಲಂತಬೆಟ್ಟು ಗ್ರಾಮದ ನಿವಾಸಿ ಶರೀಫ್ (53) ಎಂಬುವರು ಬೆಳ್ತಂಗಡಿ ಗ್ರಾಮದ ಎಸ್ ಬಿಐ ಎಟಿಎಂ ಯಂತ್ರದಿಂದ ಹಣ ಪಡೆಯಲು ಬಂದಿದ್ದರು. ಈ ವೇಳೆ ತನಗೆ ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯುವುದೇ ಇರುವುದರಿಂದ ಅಲ್ಲೇ ಪಕ್ಕದಲ್ಲಿದ್ದ ವ್ಯಕ್ತಿಯ ಕೈಯಲ್ಲಿ ಎಟಿಎಂ ಕಾರ್ಡ್ ಮತ್ತು ಪಿನ್ ಸಂಖ್ಯೆ ನೀಡಿ ಹಣ ತೆಗೆದುಕೊಡುವಂತೆ ಸಹಾಯ ಕೇಳಿದ್ದಾರೆ.
ಅಪರಿಚಿತ ವ್ಯಕ್ತಿ ಎಟಿಎಂನಿಂದ ಆರಂಭದಲ್ಲಿ 3,000 ರೂ. ಹಣ ಯಂತ್ರದಿಂದ ತೆಗೆದುಕೊಟ್ಟಿದ್ದಾರೆ. ಮೂರು ದಿನಗಳ ನಂತರ ಅವರ ಖಾತೆಯಿಂದ 1,05,300 ರೂಪಾಯಿ ಹಣ ಖಾತೆಯಲ್ಲಿ ಇಲ್ಲದೆ ಇರುವ ವಿಚಾರ ತಿಳಿದು ಬಂದಿದೆ. ಆ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ