ಬೀಜಾಡಿ ಸರ್ಕಾರಿ ಪ್ರೌಢಶಾಲೆ: ಶಿಕ್ಷಕ ಕರುಣಾಕರ ಶೆಟ್ಟಿ ಅವರಿಗೆ ಅಭಿನಂದನೆ
ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಮತ್ತು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ನನಗೆ ನೀಡಿದ್ದೀರಿ, ನನ್ನ ಎಲ್ಲಾ ಆತ್ಮೀಯ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ನೀಡಲಿ ಮತ್ತು ನನ್ನ ಸಿಬ್ಬಂದಿ ಮತ್ತು ಅಧ್ಯಾಪಕರಿಗೆ ಸಮೃದ್ಧ ವೃತ್ತಿ ಜೀವನವನ್ನು ನಾನು ಹಾರೈಸುತ್ತೇನೆ. ಅದೇ ರೀತಿಯಲ್ಲಿ ನೀವು ಸಹ ಅದೇ ದಾರಿಯಲ್ಲಿ ಮುಂದುವರೆಯಿರಿ - ಕರುಣಾಕರ ಶೆಟ್ಟಿ

Views: 1
ಕುಂದಾಪುರ: ನಿವೃತ್ತಿ ಜೀವನದಲ್ಲಿ ಕರುಣಾಕರ ಶೆಟ್ಟಿಯವರು ಇನ್ನಷ್ಟು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಉತ್ತಮ ಕೆಲಸಗಳನ್ನು ಇನ್ನೂ ಮುಂದುವರೆಸಲಿ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಹೇಳಿದರು.
ಅವರು ಇತ್ತೀಚೆಗೆ ಬೀಜಾಡಿ ಸೀತಾ ಲಕ್ಷ್ಮೀ ಮತ್ತು ಬಿ ಎಂ ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕನ್ನಡ ಭಾಷಾ ಶಿಕ್ಷಕರಾದ ಕರುಣಾಕರ್ ಶೆಟ್ಟಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ, ಕರುಣಾಕರ ಶೆಟ್ಟಿಯವರು ನಮ್ಮ ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಮತ್ತು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ನನಗೆ ನೀಡಿದ್ದೀರಿ, ನನ್ನ ಎಲ್ಲಾ ಆತ್ಮೀಯ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ನೀಡಲಿ ಮತ್ತು ನನ್ನ ಸಿಬ್ಬಂದಿ ಮತ್ತು ಅಧ್ಯಾಪಕರಿಗೆ ಸಮೃದ್ಧ ವೃತ್ತಿ ಜೀವನವನ್ನು ನಾನು ಹಾರೈಸುತ್ತೇನೆ. ಅದೇ ರೀತಿಯಲ್ಲಿ ನೀವು ಸಹ ಅದೇ ದಾರಿಯಲ್ಲಿ ಮುಂದುವರೆಯಿರಿ ಎಂದು ಸನ್ಮಾನಕ್ಕೆ ಉತ್ತರ ನೀಡಿದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ಅಪ್ಪಣ್ಣ ಹೆಗ್ಡೆ, ಬೀಜಾಡಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕಟ್ಟಡ ಸಮಿತಿಯ ಅಧ್ಯಕ್ಷ ಬಿ ಶೇಷಗಿರಿ ಗೋಟ, ಮಂಜುನಾಥ್ ರಾವ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ್ ಶೆಟ್ಟಿ, ಡಯಾಸ್ ಉಪನ್ಯಾಸಕ ಗಣೇಶ್ ಭಾಗವತ ,ಗ್ರಾಮ ಪಂಚಾಯತ್ ಸದಸ್ಯ ಶೇಖರ್ ಚಾತ್ರ ಬೆಟ್ಟು, ಮಂಜುನಾಥ್ ಕುಂದರ್, ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ಬಿ. ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಣೀಶ್, ಶಾಲಾ ಮುಖ್ಯ ಶಿಕ್ಷಕಿ ವಿನೋದ. ಬಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತರಾದ ಕನ್ನಡ ಭಾಷಾ ಶಿಕ್ಷಕ ಕರುಣಾಕರ ಶೆಟ್ಟಿ ಅವರನ್ನು ಶಾಲಾ ಎಸ್‌ಡಿಎಂಸಿ ಸೇರಿದಂತೆ ನಾನಾ ಸಂಘ ಸಂಸ್ಥೆಗಳು ಗ್ರಾಮಸ್ಥರ ಸಹಯೋಗದೊಂದಿಗೆ ಅಭಿನಂದಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ವಿನೋದ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ದಿಗಂತ್, ದೃಷ್ಟಿ ಮತ್ತು ಶಿಕ್ಷಕರಾದ ಬಾಲಚಂದ್ರ ಹೆಬ್ಬಾರ್, ಶಿಕ್ಷಕ ನಟರಾಜ್ ನಿವೃತ್ತರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಕ್ಷಕಿ ಶ್ವೇತ ಸನ್ಮಾನ ಪತ್ರ ವಾಚಿಸಿದರು, ಶಿಕ್ಷಕ ಸದಾನಂದ ಬೈಂದೂರು ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಪ್ರೇಮ ವಂದಿಸಿದರು.