ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಆಷಾಢ ಸಂಭ್ರಮ”

Views: 362
ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಲ್ಲಿನ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆ ಆಶ್ರಯದಲ್ಲಿ ಆಷಾಢ ಸಂಭ್ರಮ ಅಗಸ್ಟ್ 10 ರಂದು ದೇವಸ್ಥಾನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ದೇಗುಲದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ತೆಂಗಿನ ಹೂವನ್ನು ಅರಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, “ನಮ್ಮ ಹಿರಿಯರು ಪರಿಸರದಲ್ಲಿ ದೊರೆಯುವ ಸೊಪ್ಪು, ಗಡ್ಡೆ ಗೆಣಸುಗಳನ್ನು ಬಳಸಿ ಅರೋಗ್ಯಯುತವಾಗಿ ಬದುಕಿದ್ದರು. ಇಂದು ಪಾಶ್ಚಾತ್ಯ ತಿನಿಸಿಗೆ ಮಾರುಹೋಗಿ ವಿವಿಧ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಆದರೆ ಕರಾವಳಿ ಪ್ರದೇಶ ವಿಭಿನ್ನ ಶೈಲಿಯ ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತು ಆಹಾರ ಪದ್ಧತಿಗೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಮಾದರಿಯಾಗಲಿ” ಎಂದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮೀಣ ಆಟಗಳು ಮತ್ತು ಸಾಂಸ್ಕೃತಿಕ ಆಹಾರೋತ್ಸವ ಕಾರ್ಯಕ್ರಮದಲ್ಲಿ 41 ಮನೆಯವರಿಂದ 61ಭಕ್ಷ್ಯಗಳನ್ನು ತಯಾರಿಸಿ ಸಾಮೂಹಿಕ ಸವಿಯೂಟ ನಡೆಯಿತು.
ವೇದಿಕೆಯಲ್ಲಿ ಹಳ್ಳಿಯ ಜನಪದ ಸೊಗಡಿನ ಅಕ್ಕಿಮುಡಿ, ಕಳಸಿಗೆ, ಸೇರು, ಹೆರ್ಮಣಿ ಮುಂತಾದ ವಸ್ತುಗಳನ್ನು ಪ್ರದರ್ಶಿಸಿ ಗಮನ ಸೆಳೆಯಿತು.
ಭಕ್ಷ್ಯತಯಾರಿಸಿದವರಿಗೆ ಅನುಗ್ರಹ ಪ್ರಸಾದ ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಾರ್ಕೂರು ಶ್ರೀನಿವಾಸ ಶೆಟ್ಟಿಗಾರ ಮತ್ತು ಕುಟುಂಬಿಕರು ಬಹುಮಾನದ ಪ್ರಾಯೋಜಕರಾಗಿದ್ದರು.
ಮನೆಯಿಂದಲೇ ತಯಾರಿಸಿದ ವಿವಿಧ ಭಕ್ಷ್ಯಗಳು
ಸ್ವೀಟ್ ಕಾರ್ನ್, ಅಕ್ಕಿ ಹುಡಿ, ಶಾವಿಗೆ, ಒಗ್ಗರಣೆ ಪುಂಡೆ, ಹಾಗಲಕಾಯಿ ಮತ್ತು ಮೆಣಸು ಸಂಡಿಗೆ, ಅಪ್ಪ, ಕೊಬ್ಬರಿ ಒಣ ಮೆಣಸಿನಕಾಯಿ ಚಟ್ನಿ, ಕೊಟ್ಟೆ ಕಡಬು ಸಾಂಬಾರ್, ಕೆಸುವಿನ ದಂಟಿನ ಪಲ್ಯ, ದೋಸೆ, ಕೆಸುವಿನ ಚಟ್ನಿ, ನುಗ್ಗೆ ಸೊಪ್ಪಿನ ಪತ್ರೊಡೆ ಹಲಸಿನ ಗೂಂಜಿನ ಚಟ್ನಿ, ಮಾವಿನಕಾಯಿ ಚಟ್ನಿ, ಹಲಸಿನ ಬೀಜ ಮತ್ತು ಚಗಟೆ ಸೊಪ್ಪಿನ ವಡೆ, ಮೆಂತೆ ಗಂಜಿ, ಕಳಲೆ ಉಪ್ಪಿನಕಾಯಿ, ಕೆತ್ತೆ ಮಾವಿನ ಕಾಯಿ ಉಪ್ಪಿನಕಾಯಿ, ಕೆಸುವಿನ ಚಟ್ನಿ, ಕೆಸುವಿನ ಮಿಕ್ಸ್ಡ ಹುಳಿ, ಚಗಟೆ ಸೊಪ್ಪು ಮತ್ತು ಹಲಸಿನ ಬೀಜ ಮಿಕ್ಸೆಡ್ ಪಲ್ಯ, ಮಿಡಿ ಉಪ್ಪಿನಕಾಯಿ, ಹೆಸರು ಕಾಳು ಕಿಚ್ಚಡಿ, ಜೀಗುಜ್ಜೆ ಗಸಿ, ನುಗ್ಗೆ ಸೊಪ್ಪಿನ ಪಲ್ಯ, ಅರಸಿನ ಎಲೆ ಕಡುಬು, ಹುರಿದ ದಾಣಿ, ಉಪ್ಪಿನ ಹಲಸಿನ ಸೊಳೆ, ಅಪ್ಪದ ಅಡ್ಡೆ, ಗೆಣಸಿನ ಹಪ್ಪಳ ಹುರುಳಿ ಚಟ್ನಿ, ಪೂಂಬೆ ಗಸಿ, ಕೇನೆ ಮುದ್ದೆ, ಹೆಸರುಬೇಳೆ ತೊವೆ, ಚಕ್ಕುಲಿ, ಪತ್ರೋಡೆ, ಅತ್ರಾಸ್, ಹುರಳಿ ಉಂಡೆ, ಉರಗ ಚೆಟ್ನಿ, ಪತ್ರೊಡೆ, ಚಗಟೆ ಸೊಪ್ಪಿನ ಪಲ್ಯ, ಉರಗ ಚೆಟ್ನಿ, ಹುರುಳಿ ಚಟ್ನಿ, ನೋಳಿ ಸೊಪ್ಪಿನ ದೋಸೆ, ಕೆಸುವಿನ ವಡೆ, ಕಾಳು ಮೆಣಸಿನ ಕಷಾಯ, ಕೊತ್ತಂಬರಿ ಗಂಜಿ, ಹಲಸಿನ ಕಡಬು, ಮಾವಿನಹಣ್ಣಿನ ಪದಾರ್ಥ, ಮಣ್ಣಿ
ವೇದಿಕೆಯಲ್ಲಿ ವೀರೇಶ್ವರ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ್ ಮಣಿಪಾಲ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಾಸ್ತಾನ, ಸಂಘಟನಾ ಸಮಿತಿಯ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ ಸಂತೆಕಟ್ಟೆ, ಸಹ ಮೊಕ್ತೇಸರ ಯಡಾಡಿ ಮಹಾಬಲ ಶೆಟ್ಟಿಗಾರ, ಪದ್ಮನಾಭ ಶೆಟ್ಟಿಗಾರ ಕಾರ್ಕಡ, ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ, ಸಹ ಮೊಕ್ತೇಸರರು, ಗುರಿಕಾರರು ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಮತಿ ಯಶವಂತಿ ಜನಾರ್ಧನ ಶೆಟ್ಟಿಗಾರ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು.ನಂತರ ಅವರು ಆಷಾಡಿ ಸಂಭ್ರಮದಲ್ಲಿ ಹಾಡನ್ನು ಹಾಡಿ ಸಂಭ್ರಮಿಸಿ ನೆರೆದವರು ಹೆಜ್ಜೆ ಹಾಕಿದರು.
ಜನಾರ್ಧನ್ ಶೆಟ್ಟಿಗಾರ್ ಚೇರ್ಕಾಡಿ, ಶಿಕ್ಷಕ ನಾರಾಯಣ ಶೆಟ್ಟಿಗಾರ ಹಂದಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಂಜೀವ ಶೆಟ್ಟಿಗಾರ ಸಾಸ್ತಾನ ವಂದಿಸಿದರು.