ಬಾರ್ಕೂರು: ಬ್ರಾಹ್ಮೀ ಮುಹೂರ್ತದಲ್ಲಿ ಶಂಖನಾದ ಹಾಗೂ ಕುಲ ದೇವತಾ ಸ್ತುತಿ ಪಠಣ, ಉಗ್ರಾಣ ಮುಹೂರ್ತ
ಬಾರ್ಕೂರು ಮಹಾ ಸಂಸ್ಥಾನದ ಡಾಕ್ಟರ್ ವಿಶ್ವ ಸಂತೋಷ ಭಾರತಿ ಶ್ರೀಗಳಿಂದ ದೀಪ ಪ್ರಜ್ವಲಿಸಿ ಉಗ್ರಾಣ ಮುಹೂರ್ತ ನೆರವೇರಿಸಿದರು.

Views: 207
ಬಾರ್ಕೂರು: ಬ್ರಾಹ್ಮೀ ಮುಹೂರ್ತದಲ್ಲಿ ಶಂಖನಾದ ಹಾಗೂ ಕುಲ ದೇವತಾ ಸ್ತುತಿ ಪಠಣ, ಉಗ್ರಾಣ ಮುಹೂರ್ತ
ಕನ್ನಡ ಕರಾವಳಿ ಸುದ್ದಿ: ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟ- ಬಂಧ ಬ್ರಹ್ಮಕಲಕೋತ್ಸವ ಅಂಗವಾಗಿ ಫೆಬ್ರವರಿ 14 ಗುರುವಾರದಂದು ‘ಬ್ರಾಹ್ಮೀ ಮುಹೂರ್ತದಲ್ಲಿ ಶಂಖನಾದ ಹಾಗೂ ಕುಲ ದೇವತಾ ಸ್ತುತಿ ಪಠಣ’ ಚಾಲನೆಗೊಂಡಿತು.
ಉಡುಪಿಯ ವೈದ್ಯ ಡಾ. ಚಂದನ್ ಶೆಟ್ಟಿಗಾರರು ಶಂಖನಾದ ಮೊಳಗಿಸಿ ಮತ್ತು ಕುಲದೇವತಾ ಸ್ತುತಿ ಪಠಿಸುವುದರ ಮೂಲಕ ಚಾಲನೆಗೊಳಿಸಿದರು.
ಫೆಬ್ರವರಿ 15 ರಿಂದ 19 ರವರೆಗೆ ಪ್ರತಿದಿನ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಇದನ್ನು ಅನುಷ್ಠಾನಗೊಳಿಸುವಂತೆ ತಿಳಿಸಿ, ಶುಭ ಹಾರೈಸಿದರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮೊಕ್ತೇಸರರಾದ ಡಾ.ಜಯರಾಮ್ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹೆಚ್ಎ ಗೋಪಾಲ್ ಶೆಟ್ಟಿಗಾರ್, ದೇವಳದ ಪ್ರಧಾನ ಮಂತ್ರಿಗಳಾದ ವೇದಮೂರ್ತಿ ರಮೇಶ್ ಭಟ್, ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ್ ಶೆಟ್ಟಿಗಾರ್ ಮಣಿಪಾಲ ಉಪಸ್ಥಿತರಿದ್ದರು. ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಸುಧಾಕರ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.
ಬಾರ್ಕೂರು ಮಹಾ ಸಂಸ್ಥಾನದ ಡಾಕ್ಟರ್ ವಿಶ್ವ ಸಂತೋಷ ಭಾರತಿ ಶ್ರೀಗಳಿಂದ ದೀಪ ಪ್ರಜ್ವಲಿಸಿ ಉಗ್ರಾಣ ಮುಹೂರ್ತ ನೆರವೇರಿಸಿದರು.
ನಂತರ ಆಶೀರ್ವಚಿಸಿ, ಕರಾವಳಿಯ ಬಹುತೇಕ ಹೆಚ್ಚಿನ ಸಮುದಾಯದವರಿಗೆ ದೇವಸ್ಥಾನಗಳ ನೆಲೆಬೀಡು, ಬಾರ್ಕೂರು ಮೂಲ ಕ್ಷೇತ್ರವಾಗಿದೆ. ಸದ್ಯದಲ್ಲಿಯೇ ಬಾರಕೂರಿನಲ್ಲಿ ಬಾರ್ಕೂರು ಉತ್ಸವಕ್ಕೆ ಚಾಲನೆ ನೀಡಲು ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಅತ್ಯಗತ್ಯ ಎಂದರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಬಾರ್ಕೂರು, ಬ್ರಹ್ಮಕಲಕೋತ್ಸವ ಸಮಿತಿಯ ಅಧ್ಯಕ್ಷ ಎಚ್.ಎ. ಗೋಪಾಲ್, ದೇವಳದ ಆಡಳಿತ ಮೊಕ್ತೇಸರರಾದ ಡಾ. ಜಯರಾಮ್ ಶೆಟ್ಟಿಗಾರ್, ನಾರಾಯಣ ಶೆಟ್ಟಿಗಾರ ಸುರತ್ಕಲ್ ಉಪಸ್ಥಿತರಿದ್ದರು. ಡಾ ಶಿವಪ್ರಸಾದ್ ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಸುಧಾಕರ ವಕ್ವಾಡಿ ವಂದಿಸಿದರು.
ಇದೇ ಸಂದರ್ಭದಲ್ಲಿ ಬೆಳಿಗ್ಗೆ ದೇವಳದಲ್ಲಿ ದೀಪ ಪ್ರಜ್ವಲಿಸಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು. ಗಣಪತಿ ಪ್ರಾರ್ಥನೆ, ಕಂಕಣ ಬಂಧನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ತಂತ್ರಿಗಳಾದ ವೇದಮೂರ್ತಿ ಶ್ರೀ ಎನ್ ರಮೇಶ್ ಭಟ್ ನೇತೃತ್ವದಲ್ಲಿ ನಡೆಯಿತು.