ಇತರೆ
ಬಸ್ -ಬೈಕ್ ಡಿಕ್ಕಿ : ಬಸ್ಸಿನ ಕೆಳಗಡೆ ಸಿಲುಕಿದ ಬೈಕ್ ಸವಾರ ಆಶ್ಚರ್ಯಕರ ರೀತಿಯಲ್ಲಿ ಪಾರು

Views: 0
ಹೊನ್ನಾವರ ಪೇಟೆಯ ಎಲ್ಐಸಿ ಕ್ರಾಸ್ ಸಮೀಪ ಬಸ್- ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಬಸ್ಸಿನ ಕೆಳಗಡೆ ಸಿಲುಕಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ನಗರದ ರಸ್ತೆಯ ಕ್ರಾಸ್ ಬಳಿ ಯೂಟರ್ನ್ ಮಾಡುವಾಗ ಹಿಂಬದಿಯಿಂದ ಬರುತ್ತಿದ್ದ ಭಟ್ಕಳ ಬಸ್ ಬೈಕ್ ಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸು ಡಿವೈಡರ್ ಮೇಲೆ ನಿಂತಿದ್ದು, ಬಸ್ಸಿನ ಕೆಳಗಡೆ ಬೈಕ್ ಸಿಲುಕಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೈಕ್ ಸಂಪೂರ್ಣ ಜಖಂಗೊಂಡಿದೆ. ಬಸ್ ಬಲಭಾಗಕ್ಕೆ ಹಾನಿಯಾಗಿದೆ. ಪ್ರಕರಣ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.