ಯುವಜನ
ಬಸ್ರೂರು ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದ ಯುವಕ ಆತ್ಮಹತ್ಯೆ

Views: 300
ಕುಂದಾಪುರ: ಬಸ್ರೂರು ಗ್ರಾಮದ ಮಾರ್ಗೋಳಿಯಲ್ಲಿ ಹೊಟೇಲ್ ವ್ಯವಹಾರ ಮಾಡಿಕೊಂಡಿದ್ದ ವ್ಯಕ್ತಿ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಜ.18 ರಂದು ನಡೆದಿದೆ.
ಜಪ್ತಿ ಗ್ರಾಮದ ನಿವಾಸಿ ಗಣೇಶ್ (38) ಆತ್ಮಹತ್ಯೆ ಮಾಡಿಕೊಂಡವರು.ಅವರು ಅವಿವಾಹಿತರಾಗಿದ್ದು, ಜ. 17ರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಹೊಟೇಲ್‌ನಲ್ಲಿಯೇ ವಿಷ ಪದಾರ್ಥ ತೆಗೆದುಕೊಂಡಿದ್ದು, ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಜ. 18ರ ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾರೆ. ಅವರ ಸಹೋದರ ಸತೀಶ್ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.