ಕನ್ನಡ ಕರಾವಳಿ ಸುದ್ದಿ: ಹೆಮ್ಮಾಡಿ ಕಟ್ಟು ಸುಳ್ಸೆ ಶ್ರೀ ಕುಪ್ಪಣ್ಣ ಹ್ಯಾಗುಳಿ ಜಟ್ಟಿಗ ಹಾಗೂ ಸಪರಿವಾರ ದೈವಸ್ಥಾನ ಇದರ ಮಹಾಘಂಟೆಯ ಲೋಕಾರ್ಪಣೆ ಬ್ರಹ್ಮಕುಂಭಾಭಿಷೇಕ ಹಾಗೂ ವಾರ್ಷಿಕ ಹೂವಿನ ಪೂಜಾ ಕಾರ್ಯಕ್ರಮವು ಫೆ.04 ರಿಂದ 06 ರ ತನಕ ಜರಗಲಿರುವುದು.
ಫೆಬ್ರವರಿ 04 ರ ಮಂಗಳವಾರದಂದು ಮಹಾ ಘಂಟೆಯ ಪುರಮೆರವಣಿಗೆಯು ಹೆಮ್ಮಾಡಿ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ ಮಧ್ಯಾಹ್ನ ಗಂಟೆ 3.30 ಕೈ ಹೊರಡಲಿರುವುದು.
ರಾತ್ರಿ ಗಂಟೆ 7:30 ಕ್ಕೆ ಧಾರ್ಮಿಕ ಸಭಾ ಕಾರ್ಯ ಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ: ಸ್ಥಳೀಯ ಹಾಗೂ ಶಾಲಾ ಮಕ್ಕಳಿಂದ “ನೃತ್ಯವೈಭವ” ರಾತ್ರಿ ಗಂಟೆ 10:00 ಕ್ಕೆ ಸರಿಯಾಗಿ ಮನು ಹಂದಾಡಿ ಮತ್ತುತಂಡದವರಿಂದ ಈ ವರ್ಷದ ಹೊಸ ಕಥಾಹಂದರದ “ನಗೆ ಹಬ್ಬ” ಜರಗಲಿರುವುದು.
ಫೆಬ್ರವರಿ 05 ರ ಬೆಳಿಗ್ಗೆ ಗಂಟೆ 9:00 ಕ್ಕೆ ಧಾರ್ಮಿಕ ಪೂಜಾ ಕಾರ್ಯದೊಂದಿಗೆ ಮಹಾಘಂಟೆಯ ಲೋಕಾರ್ಪಣೆಗೊಳ್ಳಲಿರುವುದು. ಮಧ್ಯಾಹ್ನ ಗಂಟೆ 12:30 ಕ್ಕೆ ಸರಿಯಾಗಿ ಅನ್ನ ಸಂತರ್ಪಣೆ ಹಾಗೂ ರಾತ್ರಿ ಗಂಟೆ 7:00 ಕೈ ಸರಿಯಾಗಿ “ಬ್ರಹ್ಮಕುಂಭಾಭಿಷೇಕ” ಜರಗಲಿರುವುದು.
ಫೆ.06 ರ ಗುರುವಾರದಂದು ವಾರ್ಷಿಕ ಹೂವಿನ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ರಾತ್ರಿ ಗಂಟೆ 7:30 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರ ಕಮಲಶಿಲೆ ಮೇಳದವರಿಂದ ಅದ್ದೂರಿಯ ಕಾಲಮಿತಿ ಯಕ್ಷಗಾನ ಬಯಲಾಟ “ಶ್ರೀ ದೇವಿ ಮಹಾತ್ಮೆ” ಪ್ರದರ್ಶನಗೊಳ್ಳಲಿರುವುದು.