ಜನಮನ

ಫೆ.20 ಕ್ಕೆ ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಪ್ರಯುಕ್ತ ಗೋ- ಕರುಗಳ ಸ್ಪರ್ಧೆ ಪ್ರದರ್ಶನ

Views: 27

ಕೋಟ: ಇಲ್ಲಿನ ಕೋಟ ಶಾಂಭವೀ ಶಾಲಾ ಮೈದಾನದಲ್ಲಿ ಇದೇ ಫೆ.20 ರಂದು ಕೋಟ ಹೋಬಳಿ ಮಟ್ಟದ ರಾಸುಗಳ ಹಾಲು ಹಿಂಡುವ , ಗೋ ಕರುಗಳ ಮತ್ತು ಸ್ಪರ್ಧೆ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಸಮಾಜಸೇವಕ ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಅಮೃತಮಹೋತ್ಸವದ ಹಿನ್ನಲ್ಲೆಯಲ್ಲಿ ಪಶು ಪಾಲನಾ ಮತ್ತು ವೈದಕೀಯ ಸೇವಾ ಇಲಾಖೆ ಉಡುಪಿ,ಕೆ.ಎಂ ಎಫ್ ಮಂಗಳೂರು, ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ,ಗೀತಾನಂದ ಫೌಂಡೇಶನ್ ಮಣೂರು,ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲ ಕೋಟ,ಕೋಟವಲಯ ಹಾಲು ಉತ್ಪಾದಕರ ಸಹಕಾರಿ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.

ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಆನಂದ್ ಸಿ ಕುಂದರ್ ರವರಿಗೆ ಅಮೃತ ಮಹೋತ್ಸವ ಅಮೃತ ಗೌರವ ನೀಡಲಿದೆ,

ಪೂರ್ವಾಹ್ನ 8 ಕ್ಕೆ ಕರುಗಳ ನೊಂದಣಿ ಕಾರ್ಯಕ್ರಮಕ್ಕೆ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಚಾಲನೆ ನೀಡಲಿದ್ದಾರೆ,9 ಗಂಟೆಗೆ ತಾಂತ್ರಿಕ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಉದ್ಘಾಟಿಸಲಿದ್ದಾರೆ,ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪಶು ವೈದ್ಯಾಧಿಕಾರಿ ಮಂಜುನಾಥ ಅಡಿಗ ಭಾಗವಹಿಸಲಿದ್ದಾರೆ.

ಪೂರ್ವಾಹ್ನ 10 ಗಂಟೆಗೆ ಅಮೃತ ಗೌರವ ಸಮಾರಂಭವನ್ನು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ,ಅಧ್ಯಕ್ಷತೆಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ.ಕರುಗಳ ಪ್ರದರ್ಶನವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದಾರೆ

ಇದೇ ವೇಳೆ ಅತ್ಯುತ್ತಮ ಗೋ ಕರುಗಳ ತಳಿಗಳಿಗೆ ಬಹುಮಾನ ನೀಡಲಿದೆ ಎಂದು ಗೋ ಕರುಗಳ ಸ್ಪರ್ಧಾ ಸಮಿತಿ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button