ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿ 14 ರಿಂದ 20 ರವರೆಗೆ ಅಷ್ಟಬಂಧ- ಬ್ರಹ್ಮಕಲಶೋತ್ಸವ, ಹಾಲು ಹಬ್ಬ, ವಾರ್ಷಿಕ ಪೂಜೆ, ಗೆಂಡಸೇವೆ ನಡೆಯಲಿದೆ.
ಫೆ.14 ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ,
ಸಂಜೆ 4 ರಿಂದ ಹಸಿರುವಾಣಿ ಸಮರ್ಪಣೆ
ಸಂಜೆ 5 ಗಂಟೆಗೆ ಶ್ರೀ ಭದ್ರಕಾಳಿ ದುರ್ಗಾಪರಮೇಶ್ವರಿ ಪ್ರತಿಷ್ಟಾಂಗ ಬಿಂಬಶುದ್ಧಿ, ಕಲಶ ಸ್ಥಾಪನೆ,
ಸಂಜೆ 7:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
ಫೆ.15 ಶನಿವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀದೇವಿ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ
ಸಂಜೆ 4 ರಿಂದ ಭಂಡಾರದ ಮನೆಯಿಂದ ದೇವರ ಬಾಳು ಭಂಡಾರ ತರುವುದು.
ಸಂಜೆ 5ಕ್ಕೆ ಶ್ರೀ ವೀರಭದ್ರ ದೇವರ ಅಷ್ಟ ಬಂಧ ಅಧಿವಾಸ ಹೋಮ
ಬೆಳಿಗ್ಗೆ 9 ಗಂಟೆಗೆ ‘ಸ್ವಾಮಿ ಕೃಷ್ಣಾನಂದಗಿರಿ ಮಿನಿ ಸಭಾಭವನ’ (ಶ್ರೀಮತಿ ನರ್ಸಿ ಮತ್ತು ಶ್ರೀ ಕೃಷ್ಣ ಶೆಟ್ಟಿಗಾರ ಚೇರ್ಕಾಡಿ ಸ್ಮರಣಾರ್ಥ ಕೊಡುಗೆ: ಶ್ರೀಮತಿ ಕವಿತಾ ಜೆಎಸ್ ಮತ್ತು ಡಾ.ಜಯರಾಮ ಶೆಟ್ಟಿಗಾರ ಮತ್ತು ಮಕ್ಕಳು ಸಂತೆಕಟ್ಟೆ)
ಉದ್ಘಾಟನೆ: ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ಶ್ರೀ ಪಾದಂಗಳವರು.
ಬೆಳಿಗ್ಗೆ 11 ಗಂಟೆಗೆ ಶ್ರೀ ವೀರಭದ್ರ/ ಭದ್ರಕಾಳಿ/ ದುರ್ಗಾಪರಮೇಶ್ವರಿ ಭಜನಾ ಕೃತಿ ಬಿಡುಗಡೆ ಮತ್ತು ಸಂಕೀರ್ತನೆ
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ
ಸಂಜೆ 7:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು
ಫೆಬ್ರವರಿ 16 ರವಿವಾರ ಬೆಳಿಗ್ಗೆ 8 ಗಂಟೆಗೆ ನಾಗದೇವರ ಬಿಂಬ ಸ್ಥಾಪನೆ, ಕಲಶಾಭಿಷೇಕ, ಮಹಾಪೂಜೆ.
ಸಂಜೆ 5 ಗಂಟೆಗೆ ದುರ್ಗಾ ಪೂಜೆ, ಪರಿವಾರ ದೇವರ ಸನ್ನಿಧಿಯಲ್ಲಿ ಕಲಾಭಿವೃದ್ಧಿ ಕಾರ್ಯಕ್ರಮಗಳು.
ಬೆಳಿಗ್ಗೆ 9 ಗಂಟೆಗೆ ಭದ್ರತಾ ಕೊಠಡಿ ಉದ್ಘಾಟನೆ ಹಾಗೂ ಆಶೀರ್ವಚನ: ಶ್ರೀ ಕಾಣೆಯೂರು ಮಠದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು.
ಅತಿಥಿ ಗ್ರಹ ಉದ್ಘಾಟನೆ: ಶ್ರೀ ರವಿ ಶೆಟ್ಟಿಗಾರ್ ಅಧ್ಯಕ್ಷರು ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ
ಬೆಳಿಗ್ಗೆ 11ಕ್ಕೆ ಸಭಾ ಕಾರ್ಯಕ್ರಮ
ಮುಖ್ಯ ಅತಿಥಿಗಳು ಡಾ. ನಿ. ಬಿ ವಿಜಯ ಬಲ್ಲಾಳ್ ಧರ್ಮದರ್ಶಿಗಳು ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ,
ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು,
ಯಶಪಾಲ್ ಸುವರ್ಣ, ಶಾಸಕರು ಉಡುಪಿ
ರವಿ ಶೆಟ್ಟಿಗಾರ್, ಅಧ್ಯಕ್ಷರು: ದ. ಜಿಲ್ಲಾ ಪದ್ಮಶಾಲಿ ಮಹಾಸಭೆ,
ಭಕ್ತಿ ರಸಮಂಜರಿ ಕಾರ್ಯಕ್ರಮ
ಸಂಜೆ 6:30 ರಿಂದ ಭಕ್ತಿ ಪ್ರಧಾನ ನಾಟಕ ‘ಶಿವದೂತ ಗುಳಿಗ’
ಫೆಬ್ರವರಿ 17 ಸೋಮವಾರ: ಬೆಳಿಗ್ಗೆ 8 ಗಂಟೆಗೆ ಶ್ರೀ ವೀರಭದ್ರ ದೇವರ ಸನ್ನಿಧಿಯಲ್ಲಿ ಶಾಂತಿ ಹೋಮ, ಚಂಡಿಕಾಯಾಗ
ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ
ಆಶೀರ್ವಚನ: ಬಾರ್ಕೂರು ಮಹಾ ಸಂಸ್ಥಾನದ ವಿದ್ಯಾವಾಚಸ್ಪತಿ, ಡಾ. ವಿಶ್ವ ಸಂತೋಷ ಭಾರತೀ ಶ್ರೀಪಾದರು
ಸಂಜೆ: ಬ್ರಹ್ಮ ಕಲಶ ಸ್ಥಾಪನೆ
ಸಂಜೆ 6:30 ರಿಂದ ಯಕ್ಷಗಾನ: ‘ದಕ್ಷಾದ್ವರ’
ಫೆ.18 ಮಂಗಳವಾರ: ಬೆಳಿಗ್ಗೆ 9:30 ರಿಂದ ಅಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ,
ಬೆಳಿಗ್ಗೆ 11ಕ್ಕೆ ಸಭಾ ಕಾರ್ಯಕ್ರಮ
ಆಶೀರ್ವಚನ: ಪದ್ಮವಿಭೂಷಣ ರಾಜ ರಾಜರ್ಷಿ ಡಾ.ವೀರೇಂದ್ರ ಹೆಗಡೆ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಇವರಿಂದ,
ಮುಖ್ಯ ಅತಿಥಿಗಳು: ಕೋಟ ಶ್ರೀನಿವಾಸ ಪೂಜಾರಿ ಸಂಸದರು. ಕಿರಣ್ ಕುಮಾರ್ ಕೊಡ್ಗಿ, ಶಾಸಕರು. ನಾಡೋಜ ಡಾ.ಜಿ.ಶಂಕರ್ ಪ್ರವರ್ತಕರು: ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ)ಅಂಬಲಪಾಡಿ ಉಡುಪಿ, ಆನಂದ್. ಸಿ. ಕುಂದರ್ ಗೀತಾನಂದ ಫೌಂಡೇಶನ್ ಕೋಟ, ಬಿ ಶಾಂತರಾಮ್ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬಾರಕೂರು, ಧನಂಜಯ ಶೆಟ್ಟಿ ಮೊಕ್ತೇಸರರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಂದಾರ್ತಿ,
ನಿರೂಪಣೆ: ದಾಮೋದರ ಶರ್ಮ ಬಾರ್ಕೂರು,
ಮಧ್ಯಾಹ್ನ 1 ಗಂಟೆಗೆ ‘ಸಾರ್ವಜನಿಕ ಅನ್ನಸಂತರ್ಪಣೆ’
ರಾತ್ರಿ 10ಕ್ಕೆ ಗೆಂಡ ಸೇವೆ,
ಫೆ. 19 ಬುಧವಾರ: ಬೆಳಿಗ್ಗೆ 7 ರಿಂದ ಮೂಡು ಗಣಪತಿ ಸೇವೆ, ನಾಗದೇವರಿಗೆ ಹಾಲಿಟ್ಟು ಸೇವೆ, ಢಕ್ಕೆಬಲಿ, ತುಲಾಭಾರ,
12:30ಕ್ಕೆ ಮಹಾಪೂಜೆ ರಾತ್ರಿ 7:30 ರಿಂದ ಕುಮಾರ ಮಂದಿರದಲ್ಲಿ ವಿಶೇಷ ಪೂಜೆ, ಮಧ್ಯಾಹ್ನ 1 ಗಂಟೆಗೆ ‘ವಾರ್ಷಿಕ ಮಹಾಸಭೆ’
ಫೆ. 20 ಗುರುವಾರ:ಬೆಳಿಗ್ಗೆ 10:30 ರಿಂದ ಮಹಾ ಸಂಪ್ರೋಕ್ಷಣೆ ಹಾಗೂ ಶುದ್ಧ ಕಲಶ ದೇವರ ಭಂಡಾರ ಹಿಂದಿರುಗಿಸುವುದು.
ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಶ್ರೀದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಬಿ ಶ್ರೀನಿವಾಸ ಶೆಟ್ಟಿಗಾರ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷರು.