ಯುವಜನ
ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ, ಫೋಟೋ, ವಾಟ್ಸಪ್ ಚಾಟ್ ಗಳನ್ನು ಹರಿಬಿಟ್ಟು ಕೆರೆಗೆ ಹಾರಿ ಯುವಕ ಆತ್ಮಹತ್ಯೆ

Views: 365
ಕನ್ನಡ ಕರಾವಳಿ ಸುದ್ದಿ: ಪ್ರೇಯಸಿಯೊಂದಿಗಿನ ಮನಸ್ತಾಪಕ್ಕೆ ಯುವಕನೊಬ್ಬ ಆಕೆಯೊಂದಿಗಿನ ಖಾಸಗಿ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಣಗಳಲ್ಲಿ ಹರಿಬಿಟ್ಟು ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
27 ವರ್ಷದ ಸಂದೀಪ್ ಆತ್ಮಹತ್ಯೆಗೆ ಶರಣಾದವನು. ಮನೆಯಿಂದ ನಾಪತ್ತೆಯಾಗಿದ್ದ ಸಂದೀಪ್, ಇದೀಗ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ನನ್ನ ಸಾವಿಗೆ ಪ್ರೇಯಸಿ ಸಂಜನಾ ಕಾರಣ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲ, ಸಾವಿಗೂ ಮುನ್ನ ತನ್ನ ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ, ಫೋಟೋ, ವಾಟ್ಸಪ್ ಚಾಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾನೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.