ಶಿಕ್ಷಣ

ಪ್ರತಿಭೆಗಳ ಪರ್ವ – ಮದರ್ ತೆರೆಸಾ ಪದವಿ ಪೂರ್ವ ಕಾಲೇಜಿನಲ್ಲಿ TERESIANS GOT TALENT ಮತ್ತು FRESHERS’ DAY ಸಂಭ್ರಮ 

Views: 50

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಮದರ್ ತೆರೇಸಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಕೌಶಲ್ಯಗಳ ಅಭಿವೃಕ್ತಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ” ಟ್ಯಾಲೆಂಟ್ ಡೇ ” ಹಾಗೂ “ಫ್ರೆಶರ್ಸ್ ಡೇ ” ಅನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಲ್ಲಿರುವ ಕಲಾತ್ಮಕ ಸಾಂಸ್ಕೃತಿಕ ಹಾಗೂ ಸಹಪಠ್ಯ ಚಟುವಟಿಕೆಗಳ ಸಾಮರ್ಥ್ಯವನ್ನು ಹೊರ ತರಲು ಅವಕಾಶ ಕಲ್ಪಿಸುವುದಾಗಿತ್ತು. ಈ ವಿಶೇಷ ಕಾರ್ಯಕ್ರಮವನ್ನು ಶಾಲಾ ಸಂಸ್ಥಾಪಕರು ಉದ್ಘಾಟಿಸಿದರು.

‘ರೆಟ್ರೋಥೀಮ್ ‘ಅಡಿಯಲ್ಲಿ ಆರಂಭವಾದ ಕಾರ್ಯಕ್ರಮ 70- 80ರ ದಶಕದ ಶೈಲಿಯ ಪೋಷಾಕಿನೊಂದಿಗೆ ವಿದ್ಯಾರ್ಥಿಗಳು ನೃತ್ಯ, ಗೀತ ಗಾಯನ , ನಾಟಕ, ಇನ್ಸ್ಟ್ರುಮೆಂಟಲ್ ಸಂಗೀತ ಹೀಗೆ ಅನೇಕ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ತೋರಿ ಕಾರ್ಯಕ್ರಮವನ್ನು ಸಕಾಲಿಕವಾಗಿ ಸಮೃದ್ಧಗೊಳಿಸಿದರು. ಇದರಲ್ಲಿ ಪದವಿಪೂರ್ವ ವಿಭಾಗದ ಹದಿನೈದಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಇದಕ್ಕೆ ಜೊತೆಯಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ‘ಫ್ರೆಷರ್ಸ್ ಡೇ’ ಕಾರ್ಯಕ್ರಮವನ್ನು ಕೂಡ ಆಚರಿಸಲಾಯಿತು. ಈ ಕಾರ್ಯಕ್ರಮದ ಪ್ರಮುಖ ಆಶಯವೆಂದರೆ ಹೊಸದಾಗಿ ಪ್ರಥಮ ಪಿಯುಸಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ವಿಶೇಷ ಪ್ರತಿಭೆಗಳನ್ನು ಮೊದಲ ದಿನದಿಂದಲೇ ಗುರುತಿಸಿ ಪ್ರೇರೇಪಿಸುವ ಒಂದು ಸಮಗ್ರ ಪ್ರಯತ್ನ. ಇಲ್ಲಿ ಬೇರೆ ಬೇರೆ ಹಂತದ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳ ನೈಪುಣ್ಯವನ್ನು ವಿಶ್ಲೇಷಿಸಿ ಅಂತಿಮವಾಗಿ ಸಂಚಿತ್ ಕುಲಾಲ್ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ, ಶ್ರೀಜಾ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಈ ಈರ್ವರು ವಿದ್ಯಾರ್ಥಿಗಳನ್ನು ‘FRESHER OF THE YEAR ‘ಎಂದು ಗುರುತಿಸಲಾಯಿತು.

ಈ ವಿಶೇಷ ಸಂದರ್ಭದಲ್ಲಿ ಆಡಳಿತ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ತೆರೆಸಾದ ಪ್ರತಿಭಾನ್ವೇಷಣ ಕಾರ್ಯಕ್ರಮದ ತೀರ್ಪುಗಾರರಾಗಿ ಉಪಪ್ರಾಂಶುಪಾಲರಾದ ಕುಮಾರಿ ಗೀತಾ ಹಾಗೂ ಭಾಷಾ ಹಾಗೂ ಸಾಂಸ್ಕೃತಿಕ ನಿರ್ದೇಶಕಿ ಅಲಿಟಾ ಡೇಸಾ ನಿರ್ವಹಿಸಿದರು.

ಅಫೀಫಾ ಝೀಬಾ ಮತ್ತು ಕುಮಾರಿ ರೇಚಲರ ನಿರೂಪಣೆಯೊಂದಿಗೆ  ಅತ್ಯುತ್ತಮವಾಗಿ ಸಂಪನ್ನಗೊಂಡಿತು.

Related Articles

Back to top button
error: Content is protected !!