ನೆಟ್ಟಿಗರ ಕಾಟಕ್ಕೆ ಕುಂಭಮೇಳದ ರುದ್ರಾಕ್ಷಿ ಮಾಲೆ ವ್ಯಾಪಾರ ತೊರೆದ ಸುಂದರಿ ಮೊನಾಲಿಸಾ!

Views: 300
ಕನ್ನಡ ಕರಾವಳಿ ಸುದ್ದಿ: ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ವಿಶಿಷ್ಟ ಕಣ್ಣಿನ ಸುಂದರಿ ಮೊನಾಲಿಸಾ ಭೋಸ್ಲೆ (16) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೌಂದರ್ಯದಿಂದ ವೈರಲ್ ಆಗಿದ್ದರು. ಇದೀಗ ನೆಟ್ಟಗರ ಹಾವಳಿಯಿಂದಾಗಿ ಅವರು ಕುಂಭಮೇಳ ತೊರೆದಿದ್ದಾರೆ. ಮಧ್ಯ ಪ್ರದೇಶ ಮೂಲದ ಮೊನಾಲಿಸಾ ರುದ್ರಾಕ್ಷಿ ಮಾಲೆ, ಮಣಿಸರಗಳ ಮಾರಾಟಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದರು. ಆದರೆ ರುದ್ರಾಕ್ಷಿ ಮಾಲೆ ಖರೀದಿಸಲು ಬರುತ್ತಿದ್ದವರೆಲ್ಲ ಆಕೆ ಜತೆಗೆ ಸೆಲ್ಸಿ, ಫೋಟೋಗೆ ಮುಗಿಬಿದ್ದು, ವ್ಯಾಪಾರಕ್ಕೂ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ಅವರ ತಂದೆ ಮನೆಗೆ ಕಳಿಸಿದ್ದಾರೆಂದು ಆಕೆಯ ತಂಗಿ ಹೇಳಿದ್ದಾರೆ.
ಮೊನಾಲಿಸಾ ಯಾರು?
ಮಹಾ ಕುಂಭಮೇಳದ ಅತ್ಯಂತ ಸುಂದರ ಸಾಧ್ವಿ. ಹೆಸರು ಮೊನಾಲಿಸಾ. ಮಧ್ಯಪ್ರದೇಶದ ಮೊನಾಲಿಸಾ ತನ್ನ ಸೌಂದರ್ಯದಿಂದಾಗಿ ಸುದ್ದಿಯಲ್ಲಿದ್ದಾಳೆ. ‘ಕಂದು ಸುಂದರಿ’ ಎಂದೇ ಕರೆಯಲ್ಪಡುವ ಈ ಹುಡುಗಿ ಮಹಾ ಕುಂಭದಲ್ಲಿ ಮಾಲೆಗಳನ್ನು ಮಾರುತ್ತಾಳೆ. ಯಾರೋ ಒಬ್ಬರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾದ ನಂತರ ಈ ವೀಡಿಯೊ 15 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೈರಲ್ ಆದ ತಕ್ಷಣ ಜನರು ಮೊನಾಲಿಸಾಳನ್ನು ಹುಡುಕಲು ಕುಂಭಕ್ಕೆ ಬರಲು ಪ್ರಾರಂಭಿಸಿದ್ದಾರೆ.
ವಿಡಿಯೋ ವೈರಲ್ ಬಳಿಕ ಮೊನಾಲಿಸಾಳಿಗೆ ತೊಂದರೆ..
ವೈರಲ್ ಆದ ನಂತರ ಮೊನಾಲಿಸಾ ಕುಂಭಮೇಳದಲ್ಲಿ ಮಾಲೆಗಳನ್ನು ಮಾರಾಟ ಮಾಡುವುದು ಕಷ್ಟವಾಗಿದೆ. ಅವರ ವಿಡಿಯೋ ವೈರಲ್ ಆಗಿದ್ದರಿಂದ ಅವರ ಸುತ್ತಲೂ ಯಾವಾಗಲೂ ಜನರ ಗುಂಪು ಇರುವುದು ಕಂಡು ಬಂದಿದೆ. ಯೂಟ್ಯೂಬರ್‌ಗಳು ಅವರೊಂದಿಗೆ ವೀಡಿಯೊ ಮಾಡಲು ಪ್ರಾರಂಭಿಸಿದ್ದಾರೆ.
ಇದರಿಂದಾಗಿ ಮೊನಾಲಿಸಾಗೆ ತನ್ನ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವಳು ಮಾಲೆಗಳನ್ನು ಮಾರಲು ಹೋದಾಗಲೆಲ್ಲಾ, ಜನರು ಅವಳನ್ನು ಗುರುತಿಸದಂತೆ ಮುಖವಾಡ ಮತ್ತು ಸನ್ಗ್ಲಾಸ್ ಧರಿಸುತ್ತಿದ್ದಾಳೆ. ಆದರೂ ಜನರು ಸೆಲ್ಫಿ ತೆಗೆಯುವುದು ಮತ್ತು ವಿಡಿಯೋ ಮಾಡುವುದನ್ನು ಬಿಡುತ್ತಿಲ್ಲ.ರುದ್ರಾಕ್ಷಿ ಮಾಲೆ ವ್ಯಾಪಾರಕ್ಕೆ ತೊಂದರೆಯಾಗುವುದನ್ನು ಗಮನಿಸಿದ ಆಕೆಯನ್ನು ಮನೆಗೆ ಕಳುಹಿಸಲಾಗಿದೆ.