ಇತರೆ
ನಿಂತಿದ್ದ ಎರಡು ಟ್ರಕ್ ಗೆ ಲಾರಿ ಡಿಕ್ಕಿ ಹೊಡೆದು ಐವರು ಸಜೀವ ದಹನ

Views: 0
ನಿಂತಿದ್ದ ಎರಡು ಟ್ರಕ್ ಗಳಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿಕೊಂಡು ಐವರು ಸಜೀವ ದಹನ ನಡೆದ ಘಟನೆ ಜೈಪುರದಲ್ಲಿ ನಡೆದಿದೆ.
ಮೃತರಾದ ಪವನ್ (28) ಪಂಜು (18 ) ಧರಂ ಧೀರ್( 34 )ಮತ್ತು ಜಾನ್ ವಿಜಯ್ (35) ಬಿಜ್ಲಿ (26) ಇಂದು ಗುರುತಿಸಲಾಗಿದೆ.
ಹರಿಯಾಣದಿಂದ ಪುಣೆಗೆ ಜಾನುವಾರ ಸಾಗಿಸುವ ಲಾರಿ ಜೈಪುರ ಅಜ್ಮೀರ್ ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಟ್ರಕ್ ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಸೇರಿದಂತೆ ಇವರು ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ. ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.