ಧಾರ್ಮಿಕ
ನರಸಿಂಹ ಜಯಂತಿ ಪ್ರಯುಕ್ತ ವಧ೯ಂತಿ ಉತ್ಸವ

Views: 1
ಬೈಂದೂರು: ನಂಬಿದ ಭಕ್ತರಿಗೆ ಶೀಘ್ರ ಫಲದಾಯಕ ಕ್ಷೇತ್ರ ಮತ್ತು ಕಾರಣೀಕ ಸುಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹಾಗೂ ನಾಗಬನ ಸನ್ನಿಧಿಯಲ್ಲಿ ಲಕ್ಷ್ಮೀನರಸಿಂಹ ಜಯಂತಿಯ ಪ್ರಯುಕ್ತ ಶ್ರೀ ಲಕ್ಷ್ಮಿನರಸಿಂಹ ದೇವರ ವರ್ಧಂತಿ ಉತ್ಸವ ವಿಜ್ರಂಭಣೆಯಿಂದ ನಡೆಯಿತು.
ದೇವಸ್ಥಾನದ ಅರ್ಚಕರಾದ ರಾಜು ಭಟ್, ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಸುದರ್ಶನ ಗಾಣಿಗ ಹಾಗೂ ಶ್ರೀಮತಿ ಇಂದಿರಾ ,ಗ್ರಾಮಸ್ಥರಾದ ರಾಜಶೇಖರ ಮತ್ತುಮಂಜುನಾಥ ಗಾಣಿಗ ಸತ್ಯಪ್ರಸನ್ನ ಹಾಗೂ ಭಕ್ತರು ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಕೈಂಕಯ೯ ಸಲ್ಲಿಸಿ, ನಂಬಿದ ಭಕ್ತರ ಅಭೀಷ್ಠೆಗಳಿಗೆ ಪ್ರಾಥಿ೯ಸಿದರು.