ನನ್ನನ್ನು ಪಾಸ್ ಮಾಡಿ ಎಂದು ವಿದ್ಯಾರ್ಥಿನಿ ಉತ್ತರ ಪತ್ರಿಕೆಯಲ್ಲಿ ಬರೆದ ವಿಚಿತ್ರ ಮನವಿ..ಹೀಗಿದೆ..?

Views: 281
ಪರೀಕ್ಷೆ ಪಾಸ್ ಮಾಡಿಸಲು ವಿದ್ಯಾರ್ಥಿಗಳು ಶಿಕ್ಷಕರನ್ನು ಮೆಚ್ಚಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಬಿಹಾರದ ವಿದ್ಯಾರ್ಥಿನಿಯೊಬ್ಬಳು ಉತ್ತರ ಪತ್ರಿಕೆಯಲ್ಲಿ ಬರೆದಿರುವ ವಿಚಿತ್ರ ಮನವಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಹಾರದ 10ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಹೇಗಾದರೂ ತೇರ್ಗಡೆ ಮಾಡಿ ಎಂದು ಉತ್ತರ ಪತ್ರಿಕೆಯಲ್ಲಿ ಮನವಿ ಮಾಡಿದ್ದಾಳೆ. ಇಂಗ್ಲಿಷ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ತನ್ನ ತಂದೆ ತನಗೆ ಮದುವೆ ಮಾಡಿಸುತ್ತಾರೆ. ನನಗೆ ಈಗಲೇ ಮದುವೆಯಾಗುವುದಕ್ಕೆ ಇಷ್ಟವಿಲ್ಲ. ಆ ಮದುವೆಯನ್ನು ತಪ್ಪಿಸಲು ನಾನು ಪಾಸಾಗಬೇಕಿದೆ. ಹೇಗಾದರೂ ಮಾಡಿ ಇಂಗ್ಲಿಷ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದು ಮನವಿ ಮಾಡಿಕೊಂಡಿದ್ದಾಳೆ.
ನನ್ನ ತಂದೆ ಒಬ್ಬ ರೈತನಾಗಿದ್ದು, ನನ್ನನ್ನು ಓದಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ಹಾಗಾಗಿ ನನ್ನ ಪೋಷಕರಿಗೆ ನನ್ನನ್ನು ಓದಿಸಲು ಇಷ್ಟವಿಲ್ಲ. ಅವರು ಈ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳದಿದ್ದರೆ ಓದಿಸುವುದನ್ನು ಬಿಟ್ಟು, ಮದುವೆ ಮಾಡುವುದಾಗಿ ತಿಳಿಸಿದ್ದಾರೆ. ನನ್ನ ಮರ್ಯಾದೆ ಉಳಿಸಿ, ನಾನು ತುಂಬಾ ಬಡಕುಟುಂಬದಿಂದ ಬಂದವಳು ಎಂದು ಬರೆದಿದ್ದಾಳೆ