ಇತರೆ
ನದಿಯ ಮೇಲ್ಸೇತುವೆಯಿಂದ ಹಾರಿ ತಾಯಿ ಮಗಳು ಆತ್ಮಹತ್ಯೆ

Views: 65
ಶಹಾಬಾದ ಪಟ್ಟಣ ಹತ್ತಿರವಿರುವ ಕಾಗಿಣ ನದಿಯ ಮೇಲ್ಸೇತುವೆಯಿಂದ ಹಾರಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಯಿ ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ನಿಖರ ಮಾಹಿತಿ ತಿಳಿದು ಬಂದಿಲ್ಲ. ಕಲಬುರ್ಗಿಯಿಂದ ಬೈಕ್ ಮೇಲೆ ಬಂದಿದ್ದ ತಾಯಿ ಮಗಳು, ಶಹಾಬಾದ ಕಾಗಿಣ ಮೇಲ್ಸೇತುವೆ ಮೇಲೆ ಬೈಕ್ ನಿಲ್ಲಿಸಿ ನದಿಗೆ ಜಿಗಿದಿದ್ದಾರೆ ಎನ್ನಲಾಗುತ್ತಿದೆ.
ಮೃತ ಶವಗಳ ಶೋಧಕಾರ್ಯ ನಡೆಸಿದ ರಿಸ್ಕ್ಯೂವ ತಂಡದ ಸಿಬ್ಬಂದಿಗಳು, ಮೃತರ ಶವಗಳು ಹೊರ ತೆಗೆದಿದ್ದಾರೆ. ಪತಿ ಶಿವಶರಣಪ್ಪ ಪಾಟೀಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಶಹಾಬಾದ ಪೊಲೀಸ್ ರು, ಪ್ರಕರಣ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್, ಸಿಪಿಐ ನಟರಾಜ ಲಾಡೆ ಹಾಗೂ ಪಿಎಸ್ಐ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.