ಇತರೆ

ಧರ್ಮಸ್ಥಳ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವ‌ರ್, ಸಮೀ‌ರ್ ಮೇಲೆ ಎಫ್‌ಐಆ‌ರ್

Views: 199

ಕನ್ನಡ ಕರಾವಳಿ ಸುದ್ದಿ: ಪ್ರತಿಷ್ಠಿತ ಕುಟುಂಬವೊಂದರ ವಿರುದ್ಧಯೂಟ್ಯೂಬ್‌ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಮೂವರು ಯೂಟ್ಯೂಬರ್‌ಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಇಲ್ಲಿಗೆ ಸಮೀಪದ ನೇತ್ರಾವತಿ ನದಿ ತೀರದ ಪಾಂಗಳ ಎಂಬಲ್ಲಿ ಅ 6ರಂದು ನಡೆದಿದೆ. ಈ ಘಟನೆಯು ಬಳಿಕ ಎರಡು ಗುಂಪುಗಳ ನಡುವಿನ ಘರ್ಷಣೆಗೆ ತಿರುಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆನಕ ಆಸ್ಪತ್ರೆ ಆವರಣದಲ್ಲಿ ಆಗಸ್ಟ್ 6 ರಂದು ರಾತ್ರಿ ಖಾಸಗಿ ಸುದ್ದಿವಾಹಿನಿಯ ತಂಡದ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿ, ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

ಹಲ್ಲೆಗೊಳಗಾದವರು ಖಾಸಗಿ ಸುದ್ದಿವಾಹಿನಿಯ ವರದಿಗಾರ ಹರೀಶ್ ಮತ್ತು ಕ್ಯಾಮರಾಮೆನ್ ನವೀನ್‌ ಪೂಜಾರಿ.

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ವಿಷಯದ ವರದಿಗಾಗಿ ಈ ತಂಡವು ಬೆನಕ ಆಸ್ಪತ್ರೆಗೆ ತೆರಳಿತ್ತು. ಈ ಸಂದರ್ಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವ‌ರ್, ಸಮೀ‌ರ್ ಎಂ.ಡಿ., ಜಯಂತ್ ಟಿ. ಸೇರಿದಂತೆ ಇತರರ ಗುಂಪು ತಂಡದ ಮೇಲೆ ದಾಳಿ ನಡೆಸಿದೆ ಎಂದು ವರದಿಗಾರ ಹರೀಶ್ ನೀಡಿದ ದೂರಿನ ಆಧಾರದ ಮೇಲೆ, ಬಿಎನ್‌ಎಸ್ ಕಾಯಿದೆಯ ಸೆಕ್ಷನ್ 115(2), 189(2), 191(2), 351(2), 352, 2 1908 ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Related Articles

Back to top button
error: Content is protected !!