ಇತರೆ

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ: ಎರಡು ಗುಂಪುಗಳ ನಡುವಿನ ಘರ್ಷಣೆ,  ಪೊಲೀಸರಿಂದ ಲಾಠಿ ಪ್ರಹಾರ

Views: 137

ಕನ್ನಡ ಕರಾವಳಿ ಸುದ್ದಿ:ಪ್ರತಿಷ್ಠಿತ ಕುಟುಂಬವೊಂದರ ವಿರುದ್ಧ ಯೂಟ್ಯೂಬ್‌ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಮೂವರು ಯೂಟ್ಯೂಬರ್‌ಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಇಲ್ಲಿಗೆ ಸಮೀಪದ ನೇತ್ರಾವತಿ ನದಿ ತೀರದ ಪಾಂಗಳ ಎಂಬಲ್ಲಿ ಅಗಸ್ಟ್ 6ರಂದು ನಡೆದಿದೆ. ಈ ಘಟನೆಯು ಬಳಿಕ ಎರಡು ಗುಂಪುಗಳ ನಡುವಿನ ಘರ್ಷಣೆಗೆ ತಿರುಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ನೇತ್ರಾವತಿ ಪಾಂಗಳ ಎಂಬಲ್ಲಿ ಯೂಟ್ಯೂಬರ್ ಗಳನ್ನು ನೋಡಿದ ಸ್ಥಳೀಯರು ಹಲ್ಲೆ ಮಾಡಿದ್ದು ಅವರ ಕ್ಯಾಮೆರಾಗಳನ್ನು ನಾಶ ಮಾಡಿದ್ದಾರೆ. ಇನ್ನು ಯೂಟ್ಯೂಬರ್ ಗಳ ಮೇಲಿನ ಹಲ್ಲೆಯನ್ನು ಖಂಡಿಸಿದ ನೂರಾರು ಸಂಖ್ಯೆಯಲ್ಲಿ ಯುವಕರು ಸೇರಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಲ್ಲೆಗೊಳಗಾದ  ಯೂಟ್ಯೂಬರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Related Articles

Back to top button
error: Content is protected !!