
Views: 0
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. 18 ವಷ೯ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯೂ ಮತದಾನದಲ್ಲಿ ಭಾಗವಹಿಸಬೇಕು.
ನಮ್ಮ ಪ್ರತಿನಿಧಿಗಳನ್ನು ಮೇ 10 ರಂದು ನಡೆಯಲಿರುವ ಮತದಾನದಲ್ಲಿ ಯಾವುದೇ ಒತ್ತಡ, ಭಯ, ಆಮಿಷಗಳಿಗೆ ಬಲಿಯಾಗದೇ ಮತವನ್ನು ಚಲಾಯಿಸಬೇಕು.
‘ನಮ್ಮ ಮತ ನಮ್ಮ ಹಕ್ಕು’ ಯಾವುದೇ ಸಂಕೋಚವಿಲ್ಲದೆ ತಮ್ಮ ಆತ್ಮ ಸಾಕ್ಷಿಗೆ ತಕ್ಕಂತೆ ಚಲಾಯಿಸಬೇಕು.
ತಾವು ಮತ ಚಲಾಯಿಸುವುದರೊಂದಿಗೆ, ತಮ್ಮ ಮನೆಯ ಮತದಾರರನ್ನು, ತಮ್ಮ ನೆರೆ ಹೊರೆಯವರು, ನೆಂಟರಿಷ್ಟರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು.
ನಾವು ಮತಹಾಕದಿದ್ದರೆ ಏನಾಗುತ್ತೆ ಎಂಬ ಉದಾಸೀನ ಸಲ್ಲದು. ನಮ್ಮ ಒಂದೊಂದು ಅಮೂಲ್ಯವಾದ ಮತ ದೇಶದ ಹಿತರಕ್ಷಣೆ ಮಾಡುವಲ್ಲಿ ಸಹಕಾರಿ.
ಮತದಾನ ಎನ್ನುವುದು ಪವಿತ್ರವಾದ ಕಾಯ೯, ಮತದಾನ ಎನ್ನುವುದು ಶ್ರೇಷ್ಠ ದಾನವೂ ಹೌದು, ಯಾವುದೇ ಅಪೇಕ್ಷೆ ಇಲ್ಲದೆ ಮಾಡುವ ದಾನವೇ ಮತದಾನ .
ಮತದಾನ ಪ್ರಕ್ರಿಯೆಯಿಂದ ಯಾರೂ ದೂರ ಉಳಿಯದೇ ಮತದಾನ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳ ಮೂಲಕ ಅಧಿಕಾರಿಗಳ ತಂಡ ಮನೆ ಮನೆ ಪ್ರಚಾರದಲ್ಲಿ ಕಡ್ಡಾಯ ಮತದಾನಕ್ಕಾಗಿ ವಿನಂತಿಸಲಾಗಿದೆ.