ಇತರೆ

ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು 

Views: 59

ಕನ್ನಡ ಕರಾವಳಿ ಸುದ್ದಿ: ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯ ಅರಂತೋಡು ಕಿರ್ಲಾಯದಲ್ಲಿ ನಡೆದಿದೆ.

ಅಡಬಳೆ ವಾಸುದೇವ ಮೃತಪಟ್ಟ ವ್ಯಕ್ತಿ. ತೆಂಗಿನಕಾಯಿ ತೆಗೆಯಲೆಂದು ಮರಕ್ಕೆ ಹತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

Related Articles

Back to top button