ಇತರೆ
ತುಮಕೂರು: ದಕ್ಷಿಣ ಕನ್ನಡ ಮೂಲದ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆ…!

Views: 121
ತುಮಕೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿರುವ ಭಯಾನಕ ಘಟನೆ ತಾಲೂಕಿನ ಕುಚ್ಚಂಗಿ ಕೆರೆ ಬಳಿ ನಡೆದಿದೆ. ತಡರಾತ್ರಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಹೋಗಿರೋ ಶಂಕೆ ವ್ಯಕ್ತವಾಗಿದೆ. KA 43 ರಿಜಿಸ್ಟ್ರೇಷನ್ ನಂಬರಿನ ಮಾರುತಿ ಕಂಪನಿಯ ಎಸ್ ಪ್ರೆಸ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಕಾರಿನಲ್ಲಿ ಮೃತಪಟ್ಟ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಕೆರೆಗೆ ಕಾರು ತಳ್ಳಿರಬಹುದು ಎಂದು ಶಂಕಿಸಲಾಗಿದೆ. ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದ ಕಾರು ಎನ್ನಲಾಗಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲೇ ಪೊಲೀಸರು ಬೀಡು ಬಿಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ