ಇತರೆ
ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ

Views: 0
ಶ್ರೀರಂಗಪಟ್ಟಣ ತಾಲೂಕಿನ ಮರಳಾ ಸಾಲ ಗ್ರಾಮದ ತೋಟದ ಮನೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಜೀವರ್ಗಿ ತಾಲೂಕಿನ ಗಾಣಗಾಪುರದ ಶ್ರೀಕಾಂತ ತನ್ನ ಮಕ್ಕಳಾದ ಆದಿತ್ಯ (4) ಮತ್ತು ಅಮೂಲ್ಯ(2) ಅವರ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ಪತ್ನಿ ಲಕ್ಷ್ಮಿ ಎಂಬಾಕೆ ಅವಳನ್ನು ಚೂರಿಯಿಂದ ಇರಿದು ಕಲ್ಲಿನಿಂದ ಜಜ್ಜಿದ್ದಾನೆ .ಲಕ್ಷ್ಮಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಆರೋಪಿ ನಾಪತ್ತೆಯಾಗಿದ್ದಾನೆ
ಮರಳಾಗಾಲ ಗ್ರಾಮದ ಬಳಿ ಇರುವ ವಿರೂಪಾಕ್ಷ ಎಂಬುವರ ತೋಟದಲ್ಲಿ ಅಂಬಿಕಾ ಮತ್ತು ಅವರ ಎರಡನೇ ಪತ್ನಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು.
ಅಂಬಿಕಾ ಅವರ ಮೊದಲ ಪತ್ನಿಯ ಮಗಳು ಲಕ್ಷ್ಮಿ ಮತ್ತು ಅವರ ಅಳಿಯ ಮಂಗಳವಾರ ಇಲ್ಲಿಗೆ ಬಂದಿದ್ದರು. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಗ್ರಾಮಾಂತರ ಠಾಣಾ ಸಿಬ್ಬಂದಿ ಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.