ತಂಗಿಯನ್ನು ಹೇಗಾದರೂ ಮಾಡಿ ಎಕ್ಸಾಂನಲ್ಲಿ ಪಾಸ್ ಮಾಡ್ಬೇಕು.. ನಕಲಿ ಪೊಲೀಸ್ ವೇಷದಲ್ಲಿ ಬಂದು ಸಿಕ್ಕಿ ಬಿದ್ದ ಅಣ್ಣ!

Views: 64
12ನೇ ತರಗತಿ ಓದುತ್ತಿದ್ದ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಹಾಯ ಮಾಡಿದ ಅಣ್ಣನೊಬ್ಬ ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದ ಅಕೊಲಾದಲ್ಲಿ ನಡೆದಿದೆ. ಸಿಕ್ಕಿಬಿದ್ದ ಆರೋಪಿಯನ್ನು 24 ವರ್ಷದ ಅನುಪಮ ಮದನ್ ಖಂಡಾರೆ ಎಂದು ಗುರುತಿಸಲಾಗಿದೆ.
ಅನುಪಮ ಮದನ್ ಖಂಡಾರೆ ಪರೀಕ್ಷಾ ಕೇಂದ್ರಕ್ಕೆ ನಕಲಿ ಪೊಲೀಸ್ ಡ್ರೆಸ್‌ನಲ್ಲೇ ಬಂದಿದ್ದಾನೆ. ಈತನ ವೇಷಭೂಷಣ ನೋಡಿ ಯಾರಿಗೂ ಅನುಮಾನವೇ ಬಂದಿಲ್ಲ. ಆದರೆ ಪೊಲೀಸ್ ಹಿರಿಯ ಅಧಿಕಾರಿಗಳು ಎಕ್ಸಾಂ ಸೆಂಟರ್‌ಗೆ ಬಂದಾಗ ಅನುಪಮ ಮದನ್ ಸೆಲ್ಯೂಟ್ ಮಾಡಿದ್ದಾನೆ. ಪೊಲೀಸ್ ಸೆಲ್ಯೂಟ್ ಮಾಡುವಾಗ ವ್ಯತ್ಯಾಸ ಕಂಡು ಬಂದಿದ್ದು, ಕೂಡಲೇ ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಸೆಲ್ಯೂಟ್‌ನ ಅನುಮಾನ ಬಂದ ಬಳಿಕ ಅನುಪಮ ಮದನ್ ಖಂಡಾರೆ ಅವರ ಅಸಲಿ ವಿಷಯ ಬಯಲಾಗಿದೆ. ಅನುಪಮ ಅವರ ತಂಗಿ ಅದೇ ಪರೀಕ್ಷಾ ಕೇಂದ್ರದಲ್ಲಿ ಇಂಗ್ಲೀಷ್ ಭಾಷೆಯ ಎಕ್ಸಾಂ ಬರೆಯುತ್ತಿದ್ದರು. ಆಕೆಯನ್ನು ಪಾಸ್ ಮಾಡಲು ಕಾಪಿ ಚೀಟಿಗಳನ್ನು ತಂದಿದ್ದಾನೆ. ತಂಗಿಯನ್ನು ಹೇಗಾದರೂ ಪಾಸ್ ಮಾಡಲು ನಕಲಿ ಪೊಲೀಸ್ ವೇಷದಲ್ಲಿ ಬಂದು ಸಿಕ್ಕಿಬಿದ್ದಿದ್ದಾನೆ
ಮಹಾರಾಷ್ಟ್ರ ಪೊಲೀಸ್ ಡ್ರೆಸ್, ಕ್ಯಾಪ್ ಧರಿಸಿದ್ದ ಅನುಪಮ ಮದನ್ ಖಂಡಾರೆ ಮೇಲೆ ಒಂದು ಚೂರು ಅನುಮಾನವೇ ಬಂದಿಲ್ಲ. ಆದರೆ ಪೊಲೀಸ್ ಸೆಲ್ಯೂಟ್ ಮಾಡುವಾಗ ವ್ಯತ್ಯಾಸವಾಗಿದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಜೇಬಿನಲ್ಲಿ ಇಂಗ್ಲೀಷ್ ಟೆಸ್ಟ್ ಪೇಪರ್‌ಗಳು ಸಿಕ್ಕಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಂಗಿಯ ಪರೀಕ್ಷೆಯಲ್ಲಿ ನಕಲು ಮಾಡಿಸಲು ಬಂದ ಅಣ್ಣ ಈಗ ಪೊಲೀಸರ ಅತಿಥಿಯಾಗಿದ್ದಾನೆ.