ಸಾಂಸ್ಕೃತಿಕ

ಜ.9 ರಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಯಕ್ಷಗಾನದಲ್ಲೊಂದು ವಿಶಿಷ್ಟ ಪ್ರಯೋಗ…’ಅಭಿಮನ್ಯು-ಕದನ’

Views: 177

ಬ್ರಹ್ಮಾವರ: ಶ್ರೀ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ದಿನಾಂಕ 9.1.2024ರಂದು ಮಂಗಳವಾರ ರಾತ್ರಿ 9:30ಕ್ಕೆ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಯಕ್ಷರಂಗದ ಕ್ರಾಂತಿಕಾರಿ  ವೈಕುಸುಂದರ ಎತ್ತಿನಟ್ಟಿ ಅವರ ಸಂಯೋಜನೆಯಲ್ಲಿ ಯಕ್ಷರಂಗದಲ್ಲೊಂದು ವಿಶಿಷ್ಟ ಪ್ರಯೋಗ ಅಭಿಮನ್ಯು- ಕೀಚಕ- ಕೌರವ ಎಂಬ ಆಖ್ಯಾನದೊಂದಿಗೆ ಅದ್ದೂರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ವಿಶೇಷ ಆಕರ್ಷಣೆ…..!!!

ಅಭಿಮನ್ಯು‘ ಆಖ್ಯಾನದ ಒಂದೇ ಪ್ರಸಂಗದಲ್ಲಿ ಐದು ಜನ ಕಲಾವಿದರು ಅಭಿಮನ್ಯು ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ದ್ರೋಣನಾಗಿ ಈಶ್ವರ್ ನಾಯಕ್ ಮಂಕಿ

ಕೌರವನಾಗಿ ನಾಗರಾಜ ಭಂಡಾರಿ,

ಸುಭದ್ರೆಯಾಗಿ ಕೆದಿಲ ಜಯರಾಮ ಭಟ್

ಅಭಿಮನ್ಯು ಪಾತ್ರದಲ್ಲಿ ಕ್ಯಾದಗಿ ಮಹಾಬಲೇಶ್ವರ ಭಟ್, ಪ್ರವೀಣ್ ಗಾಣಿಗ, ಸನ್ಮಯ್ ಭಟ್, ರತ್ನಾಕರ ಸರಳಗಿ ಹೊನ್ನಾವರ, ರಾಜೇಶ್ ಭಂಡಾರಿ ಸ್ಪರ್ಧಾತ್ಮಕ ಪಾತ್ರದಲ್ಲಿ ನಿರ್ವಹಿಸಲಿದ್ದಾರೆ.

ಪ್ರವೀಣ್ ಗಾಣಿಗ ಕೆಮ್ಮಣ್ಣು ಹಾಗೂ ಕೆದಿಲ ಜಯರಾಮ್ ಭಟ್ ಅವರ ಅಭಿಮನ್ಯು -ಸುಭದ್ರೆ ಯಾಗಿ ಭಾವನಾತ್ಮಕವಾಗಿ ಅಭಿನಯಿಸಲಿದ್ದಾರೆ.

ಕೀಚಕ ವಧೆ’ 

ಚಂದ್ರಹಾಸ ಗೌಡ ಅವರಿಂದ ಕೀಚಕ,

ವಲಲ ಸೈಲೇಂದ್ರಿಯಾಗಿ ಪ್ರಸನ್ನ- ಶಶಿಕಾಂತ್ ಜೋಡಿಯಾಗಿ ಹಾಸ್ಯ ಭರಿತ ಸನ್ನಿವೇಶದಲ್ಲಿ ಭಾವಪೂರ್ಣ ಅಭಿನಯದಲ್ಲಿ ಮೂಡಿಬರಲಿದೆ.

ಸುದೀಷ್ಣೆಯಾಗಿ ನಾಗರಾಜ್ ಕುಂಕಿಪಾಲ್ ಮನಮೋಹಕ ಪಾತ್ರದಲ್ಲಿ ಸುಂದರವಾಗಿ ಮೂಡಿ ಬರಲಿದೆ.

‘ಗದಾಯುದ್ಧ ‘

ಪ್ರಸಂಗದಲ್ಲಿ ಪ್ರಪ್ರಥಮ ಬಾರಿ ಹೆನ್ನಾಬೈಲ್ ವಿಶ್ವನಾಥ್ ಅವರ ಕೌರವ, ರಾಜೇಶ್ ಭಂಡಾರಿ- ಭೀಮನಾಗಿ ಅಮೋಘ ಅಭಿನಯ ನೀಡಲಿದ್ದಾರೆ.

ಬೇವಿನಚರರಾಗಿ ಕಾರ್ತಿಕ್ ಪಾಂಡೇಶ್ವರ ನಗೆಯ ಅಲೆಯಲ್ಲಿ ತೇಲಿಸಲಿದ್ದಾರೆ.

ಚಂದ್ರಕಾಂತ ಮೂಡುಬೆಳ್ಳೆ ಮತ್ತು ಸೃಜನ್ ಗಣೇಶ್ ಹೆಗಡೆ ಅವರಿಂದ ಸುಶ್ರಾವ್ಯ ಹಾಡುಗಾರಿಕೆಯಿಂದ ಮನರಂಜಿಸಲಿದ್ದಾರೆ.

ಯಕ್ಷಗಾನ ಕ್ರಾಂತಿಕಾರಿ ಸಂಯೋಜಕ ಎಂದು ಹೆಸರುವಾಸಿಯಾಗಿರುವ ವೈಕುಸುಂದರ ಈ ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿದ್ದು,ಯಕ್ಷ ರಸದೌತಣವನ್ನು ಸವಿಯಲು ಬನ್ನಿ ಎಂದು ಆಮಂತ್ರಿಸಿರುತ್ತಾರೆ.

 

 

 

Related Articles

Back to top button