ಇತರೆ

ಚಿತ್ರಹಿಂಸೆ ನೀಡಿ ನೇತು ಹಾಕಿ ಕಾಂಗ್ರೆಸ್‌ ಕಾರ್ಯಕರ್ತನ ಬರ್ಬರ ಹತ್ಯೆ: ಬಿಗ್ ಟ್ವಿಸ್ಟ್..!

Views: 140

ಕಾಂಗ್ರೆಸ್ ಮುಖಂಡ.. ಸಾಮಾಜಿಜಾಲ ತಾಣದಲ್ಲಿ ಆ್ಯಕ್ಟಿವ್ ಆಗಿ ಪ್ರಚಾರ ಮಾಡ್ತಿದ್ದ.. ನಿನ್ನೆ ಎಲ್ಲಮ್ಮ ದೇವಿ ದರ್ಶನ ಪಡೆದು ವಾಪಾಸ್ ಆಗಿದ್ದ ಆತ ನಿಗೂಢ ಕಾರಣಕ್ಕೆ ಮರ್ಡರ್ ಅಗಿದ್ದಾನೆ.. ಬೆಟ್ಟದ ಮೇಲೆ ನಡೆದ ಆ ಭಯಾನಕ ಕೊಲೆ ಊರ ಜನರನ್ನು ಬೆಚ್ಚಿ ಬೀಳಿಸಿದೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ವ್ಯಾಪ್ತಿಯ ಬೆಟ್ಟದ ಮೇಲೆ ನಡೆದ ಘಟನೆ ಇಡೀ ಜಿಲ್ಲೆ ಬೆಚ್ಚಿ ಬೀಳುವಂತೆ ಮಾಡಿದೆ.. ಡೋಣಿ ಗ್ರಾಮದ ಶರಣಪ್ಪ ಸಂದಿಗೌಡರ್ ಎಂಬ 40 ವರ್ಷದ ವ್ಯಕ್ತಿ ಹೆಣವಾಗಿ ಮರದಲ್ಲಿ ನೇತಾಡುತ್ತಿತ್ತು.

ಸೋಮವಾರ ಯಲ್ಲಮ್ಮ ದೇವಿಯ ದರ್ಶನ ಪಡೆದು ಗ್ರಾಮಕ್ಕೆ ವಾಪಾಸ್ ಬರ್ತಿದ್ದ ಶರಣಪ್ಪನಿಗೆ ಅದ್ಯಾರೋ ಬೆನ್ನತ್ತಿ ಹಲ್ಲೆ ಮಾಡಿದ್ದಾರೆ.. ಡೋಣಿ ಗ್ರಾಮದ ಹೊರವಲಯದಲ್ಲಿನ ಕೆನಾಲ್ ಬಳಿಯ ಗುಡ್ಡದ ಬಳಿ ಕರೆದುಕೊಂಡು ಬಂದು ಕಣ್ಣಿಗೆ ಖಾರದು ಪುಡಿ ಎರಚಿ ವಿಕೃತಿ ಮೆದಿದ್ದಲ್ಲದೆ ಹಲ್ಲೆ ಮಾಡಿದ್ದಾರೆ.. ಅಲ್ದೆ, ಹಗ್ಗದಿಂದ ಕಾಲು ಕಟ್ಟಿ ಮರಕ್ಕೆ ನೇಣು ಬಿಗಿದು ಪರಾರಿಯಾಗಿದಾರೆ.. ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಮುಂಡರಗಿ ಪೊಲೀಸರು ತನಿಖೆ ನಡೆಸಿದ್ದಾರೆ.. ಸೀನ್ ಆಫ್ ಕ್ರೈಮ್ ತಂಡ ಶ್ವಾನದಳದೊಂದಿಗೆ ಘಟನಾ ಸ್ಥಳದ ಇಂಚಿಂಚು ಜಾಲಾಡಿದೆ.. ಹೀಗಿದ್ರೂ ಆರೋಪಿಗಳ ಸುಳಿವು ಈವರೆಗೆ ಸಿಕ್ಕಿಲ್ಲ..

ಇನ್ನು ಇಂದು ಡಂಬಳ ಗ್ರಾಮದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೀತಿತ್ತು.. ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತನೊಬ್ಬ ಅದೇ ಗ್ರಾಮದ ವ್ಯಪ್ತಿಯಲ್ಲಿ ಹೆಣವಾಗಿದ್ದ ವಿಷ್ಯ ತಿಳಿದ ಅನೇಕ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ಕೊಟ್ಟಿದ್ರು.. ಕಾಂಗ್ರೆಸ್ ಕಾರ್ಯಕರ್ತನಾಗಿದ್ರೂ ಶರಣಪ್ಪ ಪಕ್ಷಾತೀತವಾಗಿ ಸಹಾಯ ಮಾಡುವ ಮನುಷ್ಯ.. ರಾಜಕೀಯ ಕಾರಣಕ್ಕೆ ಜಗಳ ತೆಗೆಯುವ ಆಸಾಮಿಯಲ್ಲ.. ಕಷ್ಟದಲ್ಲಿರೋರಿಗೆ ಮಿಡಿಯುವ ಹೃದಯವದು.. ಗ್ರಾಮದ ಜನರ ಕೆಲಸವನ್ನು ಮುಂದೆನಿಂತು ಮಾಡ್ತಿದ್ದ.. ಆದ್ರೆ, ಶರಣಪ್ಪ ಅವರ ಕೊಲೆ ನಡೆದಿರೋದು ಗ್ರಾಮದ ಜನರಿಗೆ ನಂಬಲು ಆಗ್ತಿಲ್ಲ.. ಆದರೆ ಈತನ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಳೆ. ಇದೇ ಕಾರಣಕ್ಕೆ ಬಹಳ ತಿಂಗಳ ಕಾಲ ಹಗ್ಗಜಗ್ಗಾಟ ಜಗಳ ಧಮ್ಕಿ ಬೆದರಿಕೆ ಎಲ್ಲವೂ ನಡೆದಿದೆ ಅಂತೆ. ವಾಟ್ಸಾಪ್ ಮೂಲಕ ಕೊಲೆ ಬೆದರಿಕೆ ಹಾಕಿರೋ ಬಗ್ಗೆ ಚಾಟಿಂಗ್ ಮೆಸೇಜ್ ಹರಿದಾಡ್ತಿವೆ. ಹೀಗಾಗಿ ಕೊಲೆಯ ಹಿಂದೆ ಪತ್ನಿಯ ಕೈವಾಡ ಇದೆ ಅಂತಾ ಕೊಲೆಗೀಡಾದ ವ್ಯಕ್ತಿಯ ಸಹೋದರಿಯರು ಆರೋಪಿಸಿದ್ದಾರೆ.

Related Articles

Back to top button