ಇತರೆ

ಗುರು ಶ್ರೇಷ್ಠರೇ ನಮಗೆ ಗುರುಬಲ

Views: 37

ಕನ್ನಡ ಕರಾವಳಿ ಸುದ್ದಿ: ಹೌದು ಈ ಜಗತ್ತಿನಲ್ಲಿ ಎನಾದರೂ ಕಲಿಯಬೇಕಿಂದಿದ್ದರೆ ಒಬ್ಬ ಶ್ರೇಷ್ಠ ಗುರು ಬೇಕು. ‘ಗು’ ಎಂದರೆ ಕತ್ತಲೆ, ‘ರು’ ಎಂದರೆ ಬೆಳಕು, ಕತ್ತಲನ್ನು ಹೊಡೆದೊಡಿಸುವ ಬೆಳಕು ಗುರು ಎಂಬರ್ಥವಿತ್ತು ನಾನೊದಿದ ಪುಸ್ತಕವೊಂದರಲ್ಲಿ. ಸಾಮಾನ್ಯವಾಗಿ ಯಾರಾದರೂ ಬದುಕಿನಲ್ಲಿ ದಾರಿ ತಪ್ಪಿದಾಗ ಹೇಳುವ ನಮ್ಮ ಹಳ್ಳಿಯ ಆಡುಭಾಷೆಯೊಂದಿದೆ ಅದೆನೇಂದರೆ ‘ಹಿಂದೆ ಒಬ್ಬ ಗುರು ಮುಂದೆ ಒಂದು ಗುರಿ’ ಇರಬೇಕಿತ್ತು ಅಂತ. ಅದಕ್ಕೆ ಹೇಳೋದು ಓರ್ವ ಶ್ರೇಷ್ಠ ಗುರು ಏನಾದರೊಂದು ತಿಳಿಸಿಕೊಟ್ಟರೆ ನಮ್ಮಲ್ಲಿರಬೇಕಾದ ಸಂಗತಿ ಏನೆಂದರೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬುದು.

ಕೆಲವರಿಗೆ ಅವರು ಎಲ್ಲಾ ಕಲಿತಾದ ಮೇಲೆ ಒಂದು ಅಹಂ ಕೂಡ ಬರಬಹುದು. ಅವರೇನು ಮಹಾ ನಾನೀಗ ಎಲ್ಲಾ ಕಲಿತ್ತಿದ್ದೆನಲ್ಲ ನನಗೀಗ ಎಲ್ಲವೂ ಗೊತ್ತಿದೆ ಎಂಬುದು, ಇಂಥ ವಿದ್ಯೆ ಬಹುತೇಕ ಬಹುಕಾಲ ಉಳಿಯದು ಕಾರಣ ವ್ಯಕ್ತಿ ನಿಷ್ಠೆ,ಗುರು ನಿಷ್ಠೆ ಅಲ್ಲಗಳೆಯುವುದರಿಂದ. ಒಂದಕ್ಷರ ಕಲಿಸಿದಾತಂ ಗುರು ಎಂಬ ನಾಣ್ಣುಡಿಯೊಂದಿದೆ ಹಾಗಾಗಿ ಏನೇ ಕಲಿಯಲು ಗುರು ಬೇಕೇ ಬೇಕು. ನಮ್ಮ ಸಂಸ್ಕೃತಿಯಲ್ಲಿ ಗುರು ಪರಂಪರೆ ಎಷ್ಟು ಹಾಸು ಹೊಕ್ಕಾಗಿ ,ಗಾಢವಾಗಿದೆ ಎಂದರೆ ಏಕಲವ್ಯನೂ ಕೂಡ ಗುರು (ದ್ರೋಣಾಚಾರ್ಯ) ವಿನ ಮೂರ್ತಿ ಇಟ್ಟುಕೊಂಡು ಬಿಲ್ಲುವಿದ್ಯೆ ಪಾರಂಗತನಾದ ಗುರು ಪರಂಪರೆ ನಮ್ಮದು. ಬಹುಜನ ಹಿತಾಯ ಬಹುಜನ ಸುಖಾಯ ಬಯಸುವ ಬಯಕೆ ನಮ್ಮದು. ಈ ಗುರು ಭಕ್ತಿ ಒಂದು ದಿನಕ್ಕೆ ಸೀಮಿತವಾಗಿ ಗುರು ಪೂರ್ಣಿಮೆಯಾಗಬಾರದು ಅದು ನಿತ್ಯ ನಿರಂತರವಾದ ಅಂದರೆ ಪ್ರತಿದಿನವೂ ಗುರು ನೆನಪು ಮಾಡುವ ಗುರು ಪೂರ್ಣಿಮೆಯಾಗಬೇಕು. ಕೆಲವು ಕಡೆ ಇದಕ್ಕೆ ಅಪವಾದವೆಂಬಂತೆ ಪ್ರತಿ ದಿನವೂ ಗುರು ಸ್ಮರಣೆ ಮಾಡಿ ತಮ್ಮ ತಮ್ಮ ಕರ್ತವ್ಯ ಮಾಡುವವರು ನಮ್ಮ ನಡುವೆ ಅನೇಕರಿರಬಹುದು.

ತುಂಬಾ ಬಾರಿ ನೆನಪಾಗದ ವಿಷಯದೊಂದಿದೆ ಅದು ನಮ್ಮ ಮೊದಲ ಗುರುವೇ ತಾಯಿ ಮತ್ತು ತಂದೆ ಎಂಬುದು.ಅದಕ್ಕೆ ಹಿರಿಯರು ಹೇಳಿದ್ದು ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಜನನಿ ಇಂದ ಪಾಠ ಕಲಿತ ಜನರು ತಾನೇ ಧನ್ಯರು.ಈ ವಾಕ್ಯ ಕೇಳಲು ಸೊಗಸಾಗಿದೆಯಲ್ಲ. ಹಾಗಾಗಿ ಅಪ್ಪ ಎಂದರೆ ಆಕಾಶ, ತಾಯಿ ಎಂದರೆ ಭೂಮಿ. ನಮ್ಮ ಇಡೀ ಜೀವನದ ದಿಕ್ಕು ದೆಸೆನೆ ನಮಗೆ ಕಲಿಸಿದ ಗುರುಗಳು. ಇಲ್ಲವಾದಲ್ಲಿ ಬದುಕೇ ದಿಕ್ಕು ಕಳೆದುಕೊಂಡ ದಿಕ್ಸೂಚಿಯಂತಾಗಬಹುದು. ಸನ್ಮಾರ್ಗದಲ್ಲಿ ನಡೆಯಲು ಗುರು ಬೇಕು, ಸತ್ ಚಿಂತನೆ, ಸಜ್ಜಿವನ , ಸದ್ಭಾವನೆ , ಸಕಾರಾತ್ಮಕ ಯೋಚನೆಗೂ ನಡೆಗೂ ಸದಾ ಕಾಲ ಗುರು ಬೇಕು. ಗುರು ವಿಲ್ಲದ ಜೀವನ ಅದು ಶೂನ್ಯ, ಊಹಿಸಿಕೊಳ್ಳುವುದು ಕೂಡ ಕಷ್ಟ. ಜೀವನದಲ್ಲಿ ಇಷ್ಟು ದೂರ ಸನ್ಮಾರ್ಗದಿಂದ ಕ್ರಮಿಸಿ ಬಂದಿದ್ದೇವಂತಾದರೆ ಅದಕ್ಕೆ ಗುರು ಕಾರಣ. ಇದಕ್ಕೆ ಸಾವಿರ ಕಾಲದ ಸಾವಿರದ ನಿದರ್ಶನಗಳಿವೆ. ಒಂದೆರಡು ಉದಾಹರಣೆಗಳನ್ನು ಕೊಡುವಾದರೆ, ಕಟುಕ ರತ್ನಾಕರ ಗುರುವಿನಿಂದ ಮಹರ್ಷಿ ವಾಲ್ಮೀಕಿಯಾದ , ಕಟುಕ ಅಂಗುಲಿಮಾಲ ಗುರುವಿನಿಂದ ಪರಿವರ್ತನೆಯಾದ… ಹೀಗೆ ಗುರುವಿನ ಬಗ್ಗೆ ಹೇಳುತ್ತಾ ಬರೆಯುತ್ತಾ ಹೋದರೆ ಅದು ಮುಗಿಯದು. ಹೀಗೆ ಬರೆಯಲು ಕಾರಣವೂ ಗುರುವೇ ಅಲ್ಲವೇ… ಗುರು ಭ್ಯೋ ನಮಃ

——ರಾಘವೇಂದ್ರ ಆಚಾರ್ಯ ಕೆದೂರು.

Related Articles

Back to top button