ಗಲ್ಲು ಶಿಕ್ಷೆಗೆ ಗುರಿಯಾದ ಅಮ್ಮನನ್ನು ಉಳಿಸಿಕೊಳ್ಳಲು ಯೆಮನ್‌ಗೆ ತೆರಳಿದ ನಿಮಿಷಾ ಪ್ರಿಯಾ ಪುತ್ರಿ

Views: 119
ಕನ್ನಡ ಕರಾವಳಿ ಸುದ್ದಿ: ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಭೇಟಿ ಮಾಡಲು ಅವರ ಪತಿ ಥಾಮಸ್ ಮತ್ತು 13 ವರ್ಷದ ಮಗಳು ಮಿಶೆಲ್ ಯೆಮನ್‌ಗೆ ತೆರಳಿದ್ದಾರೆ. ಅವರು ಅಲ್ಲಿ ಸಾನಾದ ಜೈಲಿನ ಲ್ಲಿರುವ ನಿಮಿಷಾ ಪ್ರಿಯಾ ರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಜತೆಗೆ ನಿಮಿಷಾ ಅವರಿಂದ ಹತ್ಯೆಯಾದ ಯೆಮೆನ್ ಪ್ರಜೆ ಮೆಟ್ಟಿ ಕುಟುಂಬಸ್ಥರನ್ನು ಭೇಟಿ ಮಾಡುವ ನಿರೀಕ್ಷೆ ಇದ್ದು, ತಾಯಿಗೆ ಕ್ರಮಾದಾನ ನೀಡುವಂತೆ ಮಗಳು ಮಿಶೆಲ್ ಕೋರಲಿದ್ದಾರೆ ಎನ್ನಲಾಗಿದೆ. ಕ್ರೈಸ್ತಧರ್ಮ ಪ್ರಚಾರಕ, ಆಂಧ್ರದ ಕೆ.ಎ.ಪೌಲ್ ಅವರು ಭೇಟಿಯನ್ನು ಏರ್ಪಡಿಸಿದ್ದಾರೆ.
ಕೇರಳದ ನಿಮಿಷ ಪ್ರಿಯಾ ಯೆಮೆನ್ ಜೈಲಿನಲ್ಲಿ ತುಂಬಾ ವರ್ಷಗಳಿಂದ ಇದ್ದಾಳೆ. ಆಕೆಯ ಮಗಳಾದ ಮಿಷೆಲ್ ದಶಕಗಳಿಂದ ಅಮ್ಮನನ್ನು ನೋಡಿಲ್ಲ. ಅಮ್ಮನಿಗಾಗಿ ಹಂಬಲಿಸುತ್ತಿರುವ ಆಕೆ, ಇಂಗ್ಲಿಷ್ ಹಾಗೂ ಮಲೆಯಾಳಿಯಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಐ ಲವ್ ಯೂ ಮಮ್ಮಿ. ದಯವಿಟ್ಟು ಅಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ಸಹಾಯ ಮಾಡಿ. ನನಗೆ ಆಕೆಯನ್ನು ನೋಡಬೇಕು ಅಂತಾ ತುಂಬಾ ಕಾಡುತ್ತಿದೆ. ಐ ಮಿಸ್ ಯೂ ಮಮ್ಮಿ ಮಿಶೆಲ್ ಅಮ್ಮನನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಿ ಮತ್ತು ಬಂಧಮುಕ್ತಗೊಳಿಸಿ ಎಂದು ಕಣ್ಣೀರು ಇಟ್ಟಿದ್ದಾಳೆ.
ಇನ್ನು ನಿಮಿಷಾ ಪ್ರಿಯಾ ಅವರ ಪತಿ ಟಾಮಿ ಥಾಮಸ್ ಕೂಡ ಪತ್ನಿಗಾಗಿ ಕಣ್ಣೀರು ಇಟ್ಟಿದ್ದಾರೆ. ದಯವಿಟ್ಟು ಮಡದಿಯನ್ನು ಉಳಿಸಿ. ವಾಪಸ್ ಆಕೆಯನ್ನು ತವರಿಗೆ ಕರೆದುಕೊಂಡು ಹೋಗಲು ಸಹಾಯ ಮಾಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.
ಬಳಿಕ ಯೆಮೆನ್ ಅಧಿಕಾರಿಗಳಿಗೆ ಹಾಗೂ ಸಂತ್ರಸ್ತ ತಲಾಲ್ ಕುಟುಂಬಕ್ಕೆ ನಿಮಿಷಾ ಪ್ರಿಯಾ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸಿ ಮಾತನಾಡಿರುವ ಡಾ.ಕೆ.ಎ.ಪೌಲ್, ನಿಮಿಷಾ ಪ್ರಿಯಾಗೆ ಇರುವ ಏಕೈಕ ಮಗಳು ಮಿಷೆಲ್. ಆಕೆ ಕಳೆದ 10 ವರ್ಷಗಳಿಂದ ಅಮ್ಮನನ್ನೇ ನೋಡಿಲ್ಲ. ಮಿಷೆಲ್ ಇಲ್ಲಿದ್ದಾಳೆ. ಈ ಸಂದರ್ಭದಲ್ಲಿ ನಾನು ತಲಾಲ್ ಕುಟುಂಬಕ್ಕೆ ಧನ್ಯವಾದ ಹೇಳುತ್ತೇನೆ. ನೀವು ನಿಮಿಷಾ ಪ್ರಿಯಾಳನ್ನು ಬಿಡುಗಡೆ ಮಾಡಿದ ತಕ್ಷಣ.. ಅದು ಇಂದಲ್ಲ, ನಾಳೆ ಆಗಿರಬಹುದು ಅಥವಾ ನಾಡಿದ್ದೇ ಆಗಿರಬಹುದು. ನಾವು ತುಂಬಾ ಕೃತಜ್ಞರಾಗಿರುತ್ತವೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಿಮಿಷಾ ಪ್ರಿಯಾಳನ್ನು ಯೆಮೆನ್ ಸರ್ಕಾರ ಗಲ್ಲು ಶಿಕ್ಷೆಯಿಂದ ವಿನಾಯತಿ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾರತ ಸರ್ಕಾರವಾಗಲಿ ಅಥವಾ ಯೆಮೆನ್ ಸರ್ಕಾರವಾಗಲಿ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಮಾತ್ರವಲ್ಲ ನಿಮಿಷ ಪ್ರಿಯಾಳ ಕುಟುಂಬ ಕೂಡ ಈ ಬಗ್ಗೆ ಮಾಹಿತಿ ನೀಡಿಲ್ಲ.






