ಇತರೆ

ಗಂಡ ಮನೆಯಲ್ಲಿ ಇಲ್ಲದಾಗ ಮನೆಗೆ ನುಗ್ಗಿ ಗೃಹಿಣಿಯ ಜೀವ ತೆಗೆದ ಪ್ರಿಯಕರ! 

Views: 489

ಚಿಕ್ಕಮಗಳೂರು:ಗಂಡ ಮನೆಯಲ್ಲಿ ಇಲ್ಲದಾಗ ಮನೆಗೆ ನುಗ್ಗಿದ ಪ್ರಿಯಕರ ಇಬ್ಬರು ಮಕ್ಕಳ ಎದುರೇ ಗೃಹಿಣಿಯ ಜೀವ ತೆಗೆದ ಭಯಾನಕ ಘಟನೆ ಬಾಳೆಹೊನ್ನೂರು ಸಮೀಪದ ಕಿಚ್ಚಂಬಿಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯ ತೃಪ್ತಿ. ಆರೋಪಿ ಚಿರಂಜೀವಿ ಎಂದು ತಿಳಿದುಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ತೃಪ್ತಿ ಹಾಗೂ ಚಿರಂಜೀವಿ ಇಬ್ಬರಿಗೂ ಪರಿಚಯವಾಗಿತ್ತು. ಹಲವು ದಿನಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ತಿಂಗಳ ಹಿಂದೆ ಚಿರಂಜೀವಿ ಜೊತೆ ತೃಪ್ತಿ ಹೋಗಿದ್ದಳು. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ದಾಖಲಾಗಿತ್ತು.

ಪೊಲೀಸರು ಹುಡುಕಾಟ ನಡೆಸಿದ ಮೇಲೆ ತೃಪ್ತಿ ಸಿಕ್ಕಿದ್ದು, ಮನೆಯವರ ಬಳಿ ರಾಜಿ ಸಂಧಾನ ನಡೆದಿತ್ತು. ಇದಾದ ಮೇಲೆ ಚಿರಂಜೀವಿ ಜೊತೆ ತೃಪ್ತಿ ಮಾತು ಬಿಟ್ಟಿದ್ದಳು ಎನ್ನಲಾಗಿದೆ. ಸಂಪೂರ್ಣ ಮಾತು ಬಿಟ್ಟ ಪರಿಣಾಮ ಕೋಪಗೊಂಡ ಚಿರಂಜೀವಿ  ಏಕಾಏಕಿ ಮನೆಗೆ ನುಗ್ಗಿ ತೃಪ್ತಿಯ ಮೇಲೆ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಇಷ್ಟಾದರೂ ಮಹಿಳೆ ಸಾಯದಿದ್ದಾಗ ಮನೆಯಿಂದ ಎಳೆದೊಯ್ದು ಗ್ರಾಮದ ಸಮೀಪದ ಕೆರೆಗೆ ಬಿಸಾಡಿದ್ದಾನೆ.

ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಇಬ್ಬರು ಮಕ್ಕಳ ಮುಂದೆಯೇ ಈ ಭಯಾನಕ ಕೃತ್ಯ ನಡೆದಿದೆ. ಬಾಳೆಹೊನ್ನೂರು ಪೊಲೀಸರು ಪರಾರಿಯಾಗಿದ್ದ ಘಟನೆ ನಡೆದ 5 ಗಂಟೆಗಳ ಒಳಗೆ ಕಾಡಿನೊಳಗೆ ಅವಿತು ಕುಳಿತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Related Articles

Back to top button
error: Content is protected !!