ಇತರೆ

ಗಂಡನ ಮೃತ ದೇಹದ ಮುಂದೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾಗ ಪತ್ನಿ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

Views: 208

ನವದೆಹಲಿ: ಮದುವೆಯಾದ ಮೂರು ತಿಂಗಳಿಗೆ ದಂಪತಿ ದುರಂತ ಅಂತ್ಯ ಕಂಡ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತಪಟ್ಟವರನ್ನ 25 ವರ್ಷದ ಅಭಿಷೇಕ್ ಹಾಗೂ ಅಂಜಲಿ ಎಂದು ಗುರುತಿಸಲಾಗಿದೆ. ಕಳೆದ ನವೆಂಬರ್ 30ರಂದು ಈ ಜೋಡಿಗೆ ಗಾಜಿಯಾಬಾದ್‌ನಲ್ಲಿ ಮದುವೆಯಾಗಿತ್ತು.

ಅಭಿಷೇಕ್ ಅಹ್ಲುವಾಲಿ ಹಾಗೂ ಅಂಜಲಿ ಮದುವೆಯಾದ ಬಳಿಕ ದೆಹಲಿಯ ಮೃಗಾಲಯಕ್ಕೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅಭಿಷೇಕ್‌ ಅವರಿಗೆ ಹಠಾತ್‌ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ತನ್ನ ಸ್ನೇಹಿತರಿಗೆ ಕರೆ ಮಾಡಿದ ಅಂಜಲಿ ಸಹಾಯ ಕೇಳಿದ್ದಾರೆ. ಆಗ ಅಭಿಷೇಕ್ ಅವರನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಷ್ಟರಲ್ಲಾಗಲೇ ವೈದ್ಯರು ಅಭಿಷೇಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಅಭಿಷೇಕ್ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ. ಮದುವೆಯಾಗಿ ಮೂರು ತಿಂಗಳು ಕಳೆದಿದ್ದ ಮನೆಗೆ ಅಭಿಷೇಕ್ ಮೃತದೇಹವನ್ನು ತೆಗೆದುಕೊಂಡು ಹೋಗಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಅಭಿಷೇಕ್ ಮೃತದೇಹವನ್ನು ಮನೆಗೆ ತಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ

ಅಭಿಷೇಕ್ ಮೃತದೇಹದ ಮುಂದೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾಗ ಆಕೆಯ ಪತ್ನಿ ಅಂಜಲಿ ಅಪಾರ್ಟ್‌ಮೆಂಟ್‌ನ 7ನೇ ಮಹಡಿಗೆ ಹೋಗಿ ಕೆಳಗೆ ಹಾರಿದ್ದಾಳೆ. ಅಭಿಷೇಕ್ ಸಾವನ್ನಪ್ಪಿದ 24 ಗಂಟೆಯಲ್ಲೇ ಅಂಜಲಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. 3 ತಿಂಗಳ ಹಿಂದೆ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಈಗ ಶೋಕ ಸಾಗರ ಆವರಿಸಿದೆ.

Related Articles

Back to top button