ಇತರೆ
ಗಂಗೊಳ್ಳಿ: ಮೀನುಗಾರಿಕೆಗೆ ತೆರಳಿದ್ದ ಅಲೆಯ ರಭಸಕ್ಕೆ ದೋಣಿ ಮಗುಚಿ: ಮೂವರು ನಾಪತ್ತೆ, ಒಬ್ಬ ಮೀನುಗಾರ ಪಾರು

Views: 269
ಕನ್ನಡ ಕರಾವಳಿ ಸುದ್ದಿ: ಇಂದು ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಸಿಪಾಯಿ ಸುರೇಶ ಮಾಲೀಕತ್ವದ ದೋಣಿಯಲ್ಲಿ ನಾಲ್ಕು ಜನರು ಮೀನುಗಾರರು ಹೊರಟಿದ್ದು, ಅಲೆಯ ರಭಸಕ್ಕೆ ಸಿಲುಕಿ ದೋಣಿ ಮಗುಚಿದ್ದು, ಒಬ್ಬ ಮೀನುಗಾರ ಈಜಿ ಬೇರೆ ದೋಣಿ ತಲುಪಿದ್ದು ಇನ್ನೂ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ.
ಗಂಗೊಳ್ಳಿ ದೋಣಿ ದುರಂತದಲ್ಲಿ ಸುರೇಶ್ ಖಾರ್ವಿ, ಲೋಹಿತ್, ಜಗದೀಶ್ ನಾಪತ್ತೆ ಆಗಿರುತ್ತಾರೆ. ಮೀನುಗಾರ ಸಂತೋಷ ಈಜಿ ದಡ ಸೇರಿದ್ದಾರೆ.
ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ನಡೆದಿದೆ.









