ಇತರೆ
ಖಾಸಗಿ ಬಸ್- ಗೂಡ್ಸ್ ವ್ಯಾನ್ ಡಿಕ್ಕಿ: ಹಲವು ಮಂದಿಗೆ ಗಾಯ

Views: 0
ಕುಂದಾಪುರ :ಆವರ್ಸೆ ಗೋಳಿಯಂಗಡಿ ರಸ್ತೆಯ ಅಂಡರ್ ಕಟ್ಟೆ ಎಂಬಲ್ಲಿ ರಸ್ತೆ ತಿರುವಿನಲ್ಲಿ ಖಾಸಗಿ ಬಸ್ ಹಾಗೂ ಗೂಡ್ಸ್ ವ್ಯಾನ್ ನಡುವೆ ಡಿಕ್ಕಿಯಾಗಿ ಬಸ್ ಚಾಲಕ ಸೇರಿದಂತೆ ಹಲವು ಮಂದಿಗೆ ಗಾಯವಾಗಿದೆ.
ಬುಧವಾರ ಸಂಜೆ ಹೋಳಿ ಅಂಗಡಿ ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಮತ್ತು ಗೂಳಿಯಂಗಡಿಯಿಂದ ಕುಂಜಾಲಿಗೆ ಗೇರುಬೀಜ ಸಾಗಿಸುತ್ತಿದ್ದ ಗೂಡ್ಸ್ ವ್ಯಾನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಹಲವರಿಗೆ ಗಾಯವಾಗಿದೆ .ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.