ಕೋಟ: ಮಾ.16 ರಂದು ಮಣೂರು ಅಪ್ಪು ಅಟ್ಯಾಕರ್ಸ್ ರಾಜರತ್ನ ಟ್ರೋಫಿ ವಾಲಿಬಾಲ್ ಪಂದ್ಯಾಕೂಟ

Views: 313
ಕೋಟ: ಸಮಾಜದಲ್ಲಿ ಸಾಧಕರ ಮೂಲಕ ಸ್ಪೂರ್ತಿ ಪಡೆದು ಒಂದಿಷ್ಟು ಸಮಾಜಮುಖಿ ಕಾರ್ಯಗಳನ್ನು ಅಥವಾ ಅವರ ಆದರ್ಶಗಳನ್ನು ಮೈಗೂಡಿಸಿ ಅನುಷ್ಠಾನಗೊಳಿಸುವುದನ್ನು ನಾವುಗಳು ಸದಾ ಕಾಣುತ್ತೇವೆ, ಆದರೆ ಅದೇ ರೀತಿ ಉಡುಪಿ ಜಿಲ್ಲೆಯ ಕೋಟದ ಮಣೂರು ಪರಿಸರದಲ್ಲಿ ಇತ್ತೀಚಿಗೆ ನಿಧನರಾದ ಒರ್ವ ಶ್ರೇಷ್ಠ ಚಿತ್ರನಟ,ಸಮಾಜದ ಕಣ್ಮಣಿಯಾಗಿ ಯುವ ಸಮುದಾಯಕ್ಕೆ ಸ್ಪೂರ್ತಿಯ ಸೆಲೆಯಾದ ಪುನಿತ್ ರಾಜ್ ಕುಮಾರ್ ಹೆಸರಿಗೆ ನವ ಬಣ್ಣ ಬಡಿದು ಅಪ್ಪು ಅಟ್ಯಾಕಸ್೯ ನಾಮದೇಯದೊಂದಿಗೆ ಸಮಾಜಮುಖಿ ಚಿಂತನೆಗಳನ್ನು ಪಸರಿಸಿ ಪ್ರತಿವರ್ಷ ದೀಪಾವಳಿಯಂದು ಮಣೂರು ಮೈದಾನವೊಂದರಲ್ಲಿ ದೀಪಗಳನ್ನು ಹಚ್ಚಿ ಒಂದಿಷ್ಟು ಯುವ ಸಮಾಜಕ್ಕೆ ಸ್ಪೂರ್ತಿದಾಯಕ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ಅಪ್ಪು ಅಟ್ಯಾಕಸ್೯ ಇದೀಗ ಹೊಸ ಅಧ್ಯಾಯ ಬರೆಯಲು ಹೊರಟಿದೆ.
ಮಣೂರಿನ ನಡುಬೆಟ್ಟು ಪರಿಸರದಲ್ಲಿ ಸುಮಾರು 40ಮಂದಿ ಅಧಿಕ ಯುವ ಗೆಳೆಯರು ಪುನಿತ್ ರಾಜ್ ಕುಮಾರ್ ಹೆಸರಿನೊಂದಿಗೆ ಇದೇ ಮಾ.16ರಂದು ತಾಲೂಕು ಮಟ್ಟದ ರಾಜರತ್ನ ಟ್ರೋಫಿ ವಾಲಿಬಾಲ್ ಪಂದ್ಯಾಕೂಟಕ್ಕೆ ಅಣಿಯಾಗಿದ್ದಾರೆ.ಸಾಮಾನ್ಯವಾಗಿ ಪ್ರಸ್ತುತ ಯುವ ಸಮಾಜದ ಸ್ಥಿತಿಗತಿಯನ್ನು ಅವಲೋಕಿಸಿದರೆ ಈ ಯುವಕರ ತಂಡ ಮಾದರಿಯಾಗಿ ಮುನ್ನುಗುತ್ತಿದ್ದು ಅಶಕ್ತರಿಗೆ,ಶೈಕ್ಷಣಿಕ ಸಾಧಕರಿಗೆ,ಸಮಾಜದಲ್ಲಿ ಕ್ರೀಡಾಸ್ಪೂರ್ತಿ ಮೆರೆದ ಕ್ರೀಡಾಳುಗಳಿಗೆ,ದೇಶದ ಗಡಿ ಕಾಯುವ ಸೈನಿಕರನ್ನು ಗುರುತಿಸುವ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯಲು ಹೊರಟಿದ್ದಾರೆ.
ಇದೇ ಮಾ.16.ಶನಿವಾರ ಸಂಜೆ 6.ಗಂಟೆಯಿಂದ ವಾಲಿಬಾಲ್ ರಾಜರತ್ನ ಟ್ರೋಫಿ ಪಂದ್ಯಾಕೂಟ ನಡೆಯಲಿದ್ದು 7.ಗಂಟೆಗೆ ಸನ್ಮಾನ ಕ್ರೀಡಾ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.