ಶಿಕ್ಷಣ

ಕೋಟೇಶ್ವರ ಪದವಿ ಕಾಲೇಜು: “ಕಡಲ ಆಮೆಗಳು ಜೀವ ಸಂಕುಲದ ವಿಶಿಷ್ಟ ಪ್ರಭೇದಗಳು”ಪ್ರಾತ್ಯಕ್ಷಿಕೆ ಮತ್ತು ಕಿರು ನಾಟಕ ಪ್ರದರ್ಶನ 

Views: 68

ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಐಕ್ಯೂಎಸಿ ಹಾಗೂ ಇಕೋ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಿಫ್ ವಾಚ್ ಮೆರೈನ್ ಕನ್ಸ್ರ್‌ವೇಷನ್, ಎಚ್.ಸಿ.ಎಲ್.ಎಫ್. ಫೌಂಡೇಶನ್ ಸಹಯೋಗದೊಂದಿಗೆ ಪ್ರಾತ್ಯಕ್ಷಿಕೆ ಮತ್ತು ಕಿರು ನಾಟಕದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಿಫ್ ವಾಚ್ ಮೆರೈನ್ ಕನ್ಸ್ರ್‌ವೇಷನ್ ಸಂಸ್ಥೆಯ ಔಟ್ ರಿಚ್ ಅಧಿಕಾರಿ ವೆಂಕಟೇಶ್‌ರವರು ಪ್ರಕೃತಿಯ ಸಮತೋಲನದಲ್ಲಿ ಸಮುದ್ರ ಜೀವಿಗಳ ಪಾತ್ರವನ್ನು ಸವಿಸ್ತಾರವಾಗಿ ವಿವರಿಸಿ ಮೀನುಗಳ ಸಂತಾನಾಭಿವೃದ್ಧಿಯಲ್ಲಿ ಆಮೆಗಳ ಪಾತ್ರವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ರೋಹಿತ್ ಬೈಕಾಡಿ ಅವರ ನೇತೃತ್ವದ ಮಂದಾರ ಸಾಂಸ್ಕೃತಿಕ ಕಲಾ ತಂಡವು ಕಡಲ ಆಮೆಗಳ ಮೇಲೆ ನಡೆಯುತ್ತಿರುವಂತಹ ನಿರಂತರ ಮಾನವನ ಪ್ರಹಾರವನ್ನು ಮನಮುಟ್ಟುವಂತೆ ನಾಟಕದ ಮೂಲಕ ಮನೋಜ್ಞವಾಗಿ ಅಭಿನಯಿಸಿ ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಮತ್ತು ಇಕೋ ಕ್ಲಬ್‌ನ ಸಂಚಾಲಕರಾದ ನಾಗರಾಜ ಯು. ಕಾರ್ಯಕ್ರಮವನ್ನು ಸಂಘಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ವೆಂಕಟರಾಮ್ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಇಕೋ ಕ್ಲಬ್‌ನ ವಿದ್ಯಾರ್ಥಿ ಪ್ರತಿನಿಧಿಗಳಾದ ಸುದರ್ಶನ್ ಮತ್ತು ಸಿಂಚನ ಮದ್ದೋಡಿ ಉಪಸ್ಥಿತರಿದ್ದರು.

Related Articles

Back to top button