ಸಾಂಸ್ಕೃತಿಕ

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮತ್ತೆ ಸುದ್ದಿ; ನಿರ್ದೇಶಕರು10 ಬಾರಿ ಮೈ ಮುಟ್ಟಿದ ಗಂಭೀರ ಆರೋಪ! 

Views: 115

ಕನ್ನಡ ಕರಾವಳಿ ಸುದ್ದಿ: ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲವು ವಾರಗಳ ಹಿಂದೆ ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಈ ಬ್ಯೂಟಿ, ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.

ಕೆಲವು ವಾರಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಚಿತ್ರೀಕರಣದ ಸಮಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮೊನಾಲಿಸಾ ಆರೋಪಿಸಿದ್ದರು. ಈಗ ಅವರು ನಿರ್ದೇಶಕ ಸನೋಜ್ ಮಿಶ್ರಾ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪಿಟಿಐ ವರದಿ ಪ್ರಕಾರ, ಬುಧವಾರ, ಏಪ್ರಿಲ್ 29, 2026 ರಂದು ಎಫ್‌ಐಆರ್ ದಾಖಲಿಸಲಾಗಿದೆ. ‘ದಿ ಡೈರಿ ಆಫ್ ಮಣಿಪುರ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಾನು ತುಂಬಾ ಅಸುರಕ್ಷಿತಳಾಗಿದ್ದೆ ಎಂದು ಮೊನಾಲಿಸಾ ದೂರಿನಲ್ಲಿ ತಿಳಿಸಿದ್ದಾರೆ. ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ರು. ನಿರ್ದೇಶಕರು ನನ್ನನ್ನು 10 ಬಾರಿ ಅನುಚಿತವಾಗಿ ಮುಟ್ಟಿದ್ರು ಎಂದು ಆರೋಪ ಮಾಡಿದ್ದಾರೆ.

ಏಪ್ರಿಲ್ 30, ಗುರುವಾರ ಮೊನಾಲಿಸಾ ನ್ಯಾಯಾಲಯಕ್ಕೆ ಹಾಜರಾಗಿದ್ರು, ಅಲ್ಲಿ ಅವರು ತಮ್ಮ ಅಧಿಕೃತ ಹೇಳಿಕೆಯನ್ನು ದಾಖಲಿಸಿದ್ರು. ಘಟನೆ ಮಧ್ಯಪ್ರದೇಶ ಪೊಲೀಸರ ವ್ಯಾಪ್ತಿಯಲ್ಲಿ ನಡೆದಿರುವುದ್ರಿಂದ, ಪ್ರಕರಣವನ್ನು ಅವರಿಗೆ ಹಸ್ತಾಂತರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫರ್ಮಾನ್ ಅವರನ್ನು ಮದುವೆಯಾದ ನಂತರ ಮೊನಾಲಿಸಾ ವಿವಾದಕ್ಕೆ ಸಿಲುಕಿದ್ದಾರೆ. ಇದನ್ನು ಲವ್ ಜಿಹಾದ್ ಎಂದು ಕರೆಯಲಾಗುತ್ತಿತ್ತು. ಅಲ್ಲದೆ, ಮೊನಾಲಿಸಾ ಅಪ್ರಾಪ್ತ ವಯಸ್ಕಳು ಎಂದು ಆಕೆಯ ಕುಟುಂಬ ಹೇಳಿತ್ತು. ಈ ವಿಷಯದ ತನಿಖೆಯಲ್ಲೂ ಇದು ಸಾಬೀತಾಗಿದೆ. ಇದ್ರಿಂದಾಗಿ ಫರ್ಮಾನ್ ತೊಂದರೆಗೆ ಸಿಲುಕಿದ್ದಾರೆ.

ಕುಂಭಮೇಳದ ವಿಡಿಯೋ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಈ ಯುವತಿಗೆ, ಸಿನಿಮಾ ರಂಗದಲ್ಲಿ ನಟಿಸುವ ಅವಕಾಶ ನೀಡುವುದಾಗಿ ನಿರ್ದೇಶಕ ಭರವಸೆ ನೀಡಿದ್ದ ಎನ್ನಲಾಗಿದೆ. ಈ ಸೋಗಿನಲ್ಲಿ ಆತ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ

Related Articles

Back to top button
error: Content is protected !!