ಇತರೆ
ಕುಂದಾಪುರ: ಹೇರಿಕುದ್ರು ರಾಷ್ಟ್ರೀಯ ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿಯಾಗಿ ಬಿದ್ದ ಕಾರು

Views: 170
ಕನ್ನಡ ಕರಾವಳಿ ಸುದ್ದಿ: ಹೆದ್ದಾರಿ 66ರ ಹೇರಿಕುದ್ರುವಿನ ಮೇಲು ಸೇತುವೆಯ ತಿರುವಿನಲ್ಲಿ ಕಾರೊಂದು ಬುಧವಾರ ಬೆಳಿಗ್ಗೆ ಉರುಳಿ ಬಿದ್ದಿದೆ.ಕಾರು ಚಾಲಕ ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಂಗೊಳ್ಳಿಯಿಂದ ಮಲ್ಪೆ ಕಡೆಗೆ ಗಂಗೊಳ್ಳಿಯ ಮೊಹಮ್ಮದ್ ಸಾದ್ ಎಂಬುವರು ಚಲಾಯಿಸುತ್ತಿದ್ದ ಕಾರು ಹೇರಿಕುದ್ರುವಿನ ಅಂಡರ್‌ಪಾಸ್ ಬಳಿಯ ಬೊಬ್ಬರ್ಯ ದೈವಸ್ಥಾನದ ಎದುರಿನ ಅಪಾಯಕಾರಿ ತಿರುವನ್ನು ಅರಿಯದ ಕಾರಣ, ಕಾರು ನಿಯಂತ್ರಣ ತಪ್ಪಿ, ಕೆಳಕ್ಕೆ ಪಲ್ಟಿಯಾಗಿ ಬಿದ್ದಿದೆ.ರಸ್ತೆಯ ಬದಿಗೆ ಸಾಗಿ ಮರವೊಂದಕ್ಕೆ ಡಿಕ್ಕಿಯಾಗಿ ನಿಂತಿದೆ.ಅಳಕ್ಕೆ ಬಿದ್ದರೆ ನದಿಗೆ ಪಲ್ಟಿಯಾಗಿ ಬೀಳುವ ಅಪಾಯ ತಪ್ಪಿದೆ.
ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.






