ಇತರೆ
ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಅಂದರ್- ಬಾಹರ್ ಜೂಜಾಟ; 10 ಮಂದಿ ಬಂಧನ

Views: 671
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಮಂಜುನಾಥ್ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಂಘಟಿತರಾಗಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಜೂಜಾಟ ಆಟ ಆಡುತ್ತಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಸುಬ್ರಹ್ಮಣ್ಯ, ಅಶ್ರಫ್, ಸುನೀಲ್, ಧೀರಜ್, ಶಂಕರ, ಸುಧೀರ್ ಕುಮಾರ್, ಮಧುಕರ, ಮನೋಹರ, ಗಣೇಶ್, ರಾಮ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 8,810 ರೂ ನಗದು, 10 ಮೊಬೈಲ್ ಫೋನ್, ಜೂಜಾಟ ಆಡಲು ಬಂದಿದ್ದ 3 ಬೈಕ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.